ಉಡುಪಿ: ಚೂರಿ ಇರಿದು ಯುವಕನ ಕೊಲೆ

ಉಡುಪಿ: ವ್ಯಕ್ತಿಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ಉಡುಪಿಯ ಲಕ್ಷ್ಮೀ ನಗರದಲ್ಲಿ ಇಂದು ಮುಂಜಾನೆ ನಡೆದಿದೆ. ಕೊಲೆಗೀಡಾದ ಯುವಕನನ್ನು ಯೋಗೀಶ್ (28) ಎಂದು ಗುರುತಿಸಲಾಗಿದೆ.
ಇರಿತಕ್ಕೊಳಗಾದ ಯೋಗೀಶ್ ಮಣಿಪಾಲದ ಕೆಎಂಸಿಯಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಯೋಗೀಶ್ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದರು. ಐದು ಮಂದಿ ಚೂರಿ ಇರಿದು ಪರಾರಿ ಆಗಿದ್ದಾರೆ ಎನ್ನಲಾಗುತ್ತಿದ್ದು , ವ್ಯವಹಾರ ವಿಚಾರದಲ್ಲಿ ಗಲಾಟೆ ನಡೆದಿರುವ ಸಾಧ್ಯತೆ ಇದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಕೆಎಂಸಿ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.