ಉಗ್ರರ ದಾಳಿಗೆ ಮೂವರು ಸೈನಿಕರು ಹುತಾತ್ಮ

ಇಂಫಾಲ: ಮ್ಯಾನ್ಮಾರ್ ಗಡಿಯ ಸಮೀಪ ಉಗ್ರರು ನಡೆಸಿದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‍ನ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಐವರು ಯೋಧರು ಗಂಭೀರ ಗಾಯಗೊಂಡಿದ್ದಾರೆ.
ಅಸ್ಸಾಂ ರೈಫಲ್ಸ್ ಯೋಧರ ತಂಡ ನಿನ್ನೆಯಿಂದ ಮಣಿಪುರದ ಚಾಂಡೇಲ್ ಜಿಲ್ಲೆಯಲ್ಲಿ ಗಸ್ತುನಿರತವಾಗಿತ್ತು. ಈ ವೇಳೆ ಪೀಪಲ್ಸ್ ಲಿಬರೇಶನ್ ಆರ್ಮಿ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರು ಐಇಡಿ ಬಳಸಿ ದಾಳಿ ಸಂಘಟಿಸಿದ್ದು ಸ್ಥಳದಲ್ಲೇ ಮೂವರು ಹುತಾತ್ಮರಾದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *