“ಇದೇ ಲಾಸ್ಟ್‌ ಲಾಕ್‌ಡೌನ್‌, ಇನ್ಮುಂದೆ ರಾಜ್ಯದಲ್ಲಿ ಮಾಡಲ್ಲ” -ಎಸ್‌.ಟಿ.ಸೋಮಶೇಖರ್‌

ಬೆಂಗಳೂರು: ಇದೇ ಲಾಸ್ಟ್ ಇನ್ಮುಂದೆ ರಾಜ್ಯದಲ್ಲಿ ಎಲ್ಲೂ ಲಾಕ್‌ಡೌನ್ ಮಾಡುವುದಿಲ್ಲ. ಯಾರಾದರೂ ಪಾಸಿಟಿವ್‌ ಬಂದರೆ ಅವರ ಮನೆಯನ್ನು ಮಾತ್ರ ಸೀಲ್‌ ಡೌನ್‌ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್‌ ಹೇಳಿದ್ದಾರೆ. ಮೈಸೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯೂ ಇನ್ನು ಮುಂದೆ ಲಾಕ್‌ಡೌನ್ ಇರುವುದಿಲ್ಲ. ಈಗಾಗಲೇ ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ತುಂಬಾ ಮನೆಯವರಿಗೆ ಕೊರೋನಾ ಸೋಂಕು ದೃಢಪಟ್ಟರೆ ರಸ್ತೆ ಮಾತ್ರ ಸೀಲ್‌ಡೌನ್ ಆಗಲಿದೆ‌ ಆದರೆ ಲಾಕ್‌ಡೌನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *