ಇಂಗ್ಲೆಂಡ್‌ ಸರಣಿ: ಪಾಕ್‌ ತಂಡದಲ್ಲಿ ಫವಾದ್

Pakistani cricketer Fawad Alam talks with media representatives during a training camp for the upcoming Bangladesh cricket tour at the Gaddafi Stadium in Lahore on April 8, 2015. Saeed Ajmal, 37, and Hafeez have both been included in the Pakistan squad for all three formats to be played in Bangladesh, starting with the first of three one-day internationals on April 17. AFP PHOTO / Arif ALI (Photo credit should read Arif Ali/AFP/Getty Images)

ಕರಾಚಿ: ಮುಂದೆ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಮೂರು ಟೆಸ್ಟ್‌ ಪಂದ್ಯಗಳ ಸರಣಿಗಾಗಿ ಇದೀಗ ೨೦ ಆಟಗಾರರ ಪಾಕಿಸ್ತಾನ ಕ್ರಿಕೆಟ್‌ ತಂಡ ಪ್ರಕಟಗೊಂಡಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಬ್ಯಾಟ್ಸ್‌ಮೆನ್‌ ಫವಾದ್‌ ಆಲಮ್‌ ಹೆಸರು ಕೂಡ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ೧೧ ವರ್ಷಗಳ ನಂತರ ಪಾಕಿಸ್ತಾನದ ರಾಷ್ಟ್ರೀಯ ತಂಡದಲ್ಲಿ ಫವಾದ್‌ ಆಡುವ ಸಾಧ್ಯತೆ ಇದೆ. ಇಂಗ್ಲೆಂಡ್-ಪಾಕ್ ಟೆಸ್ಟ್ ಸರಣಿ ಆಗಸ್ಟ್ 5ರಿಂದ ಆರಂಭಗೊಳ್ಳಲಿದೆ.
ಪಾಕಿಸ್ತಾನ ಕ್ರಿಕೆಟ್‌ನ ಮುಖ್ಯ ಆಯ್ಕೆಗಾರ ಮತ್ತು ಹೆಡ್ ಕೋಚ್ ಆಗಿರುವ ಮಿಸ್ಬಾ ಉಲ್ ಹಕ್ ಅವರು ಬ್ಯಾಟ್ಸ್‌ಮನ್‌ಗಳಾದ ಇಫ್ತಿಕರ್ ಅಹ್ಮದ್, ಖುಷ್ದಿಲ್ ಷಾ, ಫಖರ್ ಜಮಾನ್ ಮತ್ತು ಹೈದರ್ ಅಲಿ ಅವರಿಗೆ ಈ ಬಾರಿ ಸ್ಥಾನ ನೀಡಿಲ್ಲ. ಹೀಗಾಗಿ ಆಲಮ್ ಕಮ್‌ಬ್ಯಾಕ್‌ ಸಾಧ್ಯತೆ ಹೆಚ್ಚಿದೆ. 2019ರ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸ್ವಾರಸ್ಯಕರ ಕಾರಣ ಹೇಳಿದ ಚೋಪ್ರಾ ಎಡಗೈ ಬ್ಯಾಟ್ಸ್‌ಮನ್ ಫವಾದ್ ಆಲಮ್ 2009ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ನಲ್ಲಿ ಆಡಿದ್ದರು. ಅದಾಗಿ ಮತ್ತೆ ಆಲಮ್ ತಂಡದಲ್ಲಿ ಕಾಣಸಿಕೊಂಡಿರಲಿಲ್ಲ. ಈ ಬಾರಿ ಪ್ರಕಟವಾಗಿರುವ ತಂಡದಲ್ಲಿ ಸ್ಪಿನ್ನರ್ಸ್‌ಗಳಾದ ಕಾಶಿಫ್ ಭಟ್ಟಿ ಮತ್ತು ಯಾಸಿರ್ ಶಾ ಇದ್ದಾರೆ. ಆಲ್ ರೌಂಡರ್‌ಗಳಾದ ಫಹೀಮ್ ಅಶ್ರಫ್ ಮತ್ತು ಶಾದಾಬ್ ಖಾನ್ ಕೂಡ ಹೆಸರಿಸಲ್ಪಟ್ಟಿದ್ದಾರೆ. ಪಾಕಿಸ್ತಾನ ತಂಡ: ಅಜರ್ ಅಲಿ (ನಾಯಕ), ಬಾಬರ್ ಅಝಾಮ್ (ಉಪನಾಯಕ), ಅಬಿದ್ ಅಲಿ, ಅಸಾದ್ ಶಫೀಕ್, ಫಹೀಮ್ ಅಶ್ರಫ್, ಫವಾದ್ ಆಲಮ್, ಇಮಾಮ್ ಉಲ್ ಹಕ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸರ್ಫರಾಜ್ ಅಹ್ಮದ್ , ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಸೊಹೈಲ್ ಖಾನ್, ಉಸ್ಮಾನ್ ಶಿನ್ವಾರಿ, ವಹಾಬ್ ರಿಯಾಜ್ ಮತ್ತು ಯಾಸಿರ್ ಶಾ.

Leave a Reply

Your email address will not be published. Required fields are marked *