ಆಸ್ಪತ್ರೆ ಎದುರೇ ಕೊರೊನಾ ಸೋಂಕಿತನ ಶವ ಎಸೆದರು!

ಭೋಪಾಲ್: ಕೊರೊನಾ ಸೋಂಕಿತನ ಶವವನ್ನು ಆಸ್ಪತ್ರೆಯ ಎದುರೇ ಎಸೆದಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಎರಡು ಅಂಬ್ಯುಲೆನ್ಸ್ನಲ್ಲಿ ಪಿಪಿಇ ಕಿಟ್ ಧರಿಸಿದ್ದ ಇಬ್ಬರು ಸಿಬ್ಬಂದಿ ಬಂದು ಶವವನ್ನು ತಂದು ಆಸ್ಪತ್ರೆಯ ಎದುರು ಎಸೆದಿದ್ದಾರೆ. ವ್ಯಕ್ತಿಯೊಬ್ಬರಿಗೆ ಎರಡು ವಾರಗಳಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಇದ್ದು ಕೆಲವು ದಿನಗಳಿಂದ ಉಸಿರಾಟದ ತೊಂದರೆ ಇತ್ತೆನ್ನಲಾಗಿದೆ. ನ್ಯುಮೋನಿಯಾ ಎಂದು ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಭೋಪಾಲ್ನ ಪೀಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅವರನ್ನು ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಗೆ ಕಿಡ್ನಿ ಸಮಸ್ಯೆ ಮಾತ್ರವಲ್ಲದೆ ಹೃದಯ ಸಂಬಂಧಿ ಕಾಯಿಲೆಯು ಕೂಡ ಇದೆ ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿತ್ತು. ಹಾಗಾಗಿ ಆಕ್ಸಿಜನ್ ಸಪೋರ್ಟ್ ಇರುವ ಆಂಬ್ಯುಲೆನ್ಸ್ ಕಳುಹಿಸಿದ್ದೆವು ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ವಿಐಪಿ ರಸ್ತೆಗೆ ಬರುವಷ್ಟೊತ್ತಿಗೆ ಅವರ ಕಂಡೀಷನ್ ಕ್ರಿಟಿಕಲ್ ಆಗಿತ್ತು. ಹೀಗಾಗಿ ಆಂಬ್ಯುಲೆನ್ಸ್ ವಾಪಸ್ ಬಂದಿತ್ತು ಅವರು ಮೃತಪಟ್ಟಿದ್ದರು. ಬಳಿಕ ಎರಡೂ ಆಸ್ಪತ್ರೆ ನಡುವೆ ಗಲಾಟೆ ನಡೆದು ಶವವನ್ನು ನಡು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.