ಅಮೇರಿಕಾ ಬೀಚಲ್ಲಿ ಸನ್ನಿ ಸಖತ್ ಎಂಜಾಯ್, ನೆಟ್ಟಿಗರು ಗರಂ!

ಮುಂಬೈ: ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಕೊರೊನಾ ಪ್ರಾರಂಭವಾಗುತ್ತಲೇ ಅಮೇರಿಕಾ ಸೇರಿಕೊಡಿದ್ದು ಈಗ ಹಳೇ ಸುದ್ದಿ. ಆದರೆ ಅಮೇರಿಕಾದಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗುತ್ತಿದ್ದು ಸನ್ನಿ ಮಾತ್ರ ಇದಾವುದರ ಗೊಡವೆಯೇ ಇಲ್ಲದಂತೆ ಅಲ್ಲಿನ ಬೀಚ್ ಗಳಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೊಟೋ ಹರಿಯಬಿಟ್ಟಿದ್ದು ನೆಟ್ಟಿಗರು ಸನ್ನಿ ಅವತಾರ ಕಂಡು ಗರಂ ಆಗಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಮನೆಯಲ್ಲೇ ಇರಿ ಸೇಫ್ ಆಗಿರಿ ಎಂದು ವಿಶ್ವದೆಲ್ಲೆಡೆ ಪ್ರಚಾರ ಮಾಡುತ್ತಿರುವಾಗ ಸನ್ನಿ ಮಾತ್ರ ಮನೆಯಿಂದ ಹೊರಬಂದು ಇತರರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಕೊರೊನಾ ಭೀತಿಯಿಂದ ಭಾರತ ಬಿಟ್ಟು ಅಮೆರಿಕಕ್ಕೆ ಹಾರಿದ ಸನ್ನಿ ಲಿಯೋನ್ ಅಲ್ಲಿ ತಮ್ಮ ಕುಟುಂಬದೊಡನೆ ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ಹಂಚಿಕೊಂಡಿರುವ ಹೊಸ ಚಿತ್ರಗಳಲ್ಲಿ ಅವರು ಪತಿ ಮತ್ತು ತಮ್ಮ ಮೂರು ಮಕ್ಕಳ ಜೊತೆ ಬೀಚ್‍ನಲ್ಲಿ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಬೀಚ್‍ನಲ್ಲಿ ಓಡಾಡುತ್ತಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಸನ್ನಿ. ಮೇ 10ರಂದು ಅಮೆರಿಕಕ್ಕೆ ಹೋಗಿದ್ದ ಸನ್ನಿ ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುವ ವೇಳೆಗೆ ಮುಂಬೈನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಸನ್ನಿಲಿಯೋನ್ ರಾತ್ರೋರಾತ್ರಿ ಅಮೆರಿಕಕ್ಕೆ ತೆರಳಿದ್ದರು. ಸರ್ಕಾರ ಆಯೋಜಿಸಿದ್ದ ವಿಮಾನದಲ್ಲಿ ಅವರು ಹೋಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಸನ್ನಿ ಲಿಯೋನ್ ನಿವಾಸವಿದೆ. ಪ್ರಸ್ತುತ ಅಲ್ಲಿಯೇ ಇರುವ ಸನ್ನಿ ಲಿಯೋನ್, ಗೆಳೆಯರು, ಕುಟುಂಬದೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರಗಳನ್ನು ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Leave a Reply

Your email address will not be published. Required fields are marked *