ಅಮೆರಿಕಾದಲ್ಲೂ ಚೀನಾದ ಆಪ್ ಗಳ ಮೇಲೆ ನಿಷೇಧ ಭೀತಿ

ನವದೆಹಲಿ: ಭಾರತದಲ್ಲಿ 59 ಚೀನಾ ಆಪ್ ಗಳ ಮೇಲೆ ನಿಷೇಧದ ನಂತರ ಇದೀಗ ಚೀನಾಗೆ ಮತ್ತೊಂದು ಆಘಾತ ಎದುರಾಗಿದೆ. ಅಮೆರಿಕಾದಲ್ಲೂ ಕೂಡ ಟಿಕ್‍ಟಾಕ್ ಸಹಿತ ಹಲವು ಆಪ್ ಗಳ ಮೇಲೆ ನಿಷೇಧ ಹೇರುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸ್ವತಹ ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೋ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅಮೆರಿಕಾ ಮಾಧ್ಯಮವೊಂದರ ಜೊತೆ ಮಾತನಾಡಿದ ಪಾಂಪಿಯೋ, ಭಾರತದಲ್ಲಿ ಈಗಾಗಲೇ 59 ಆಪ್ ಗಳಿಗೆ ನಿಷೇಧ ಹೇರಲಾಗಿದ್ದು, ಆಸ್ಟ್ರೇಲಿಯಾ ಕೂಡ ನಿಷೇಧದ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ನಾವು ಕೂಡ ಗಂಭೀರವಾಗಿ ಚಿಂತನೆ ನಡೆಸಿದ್ದೇವೆ. ಹಲವು ಚೀನಾ ಆಪ್ ಗಳನ್ನು ಅಮೆರಿಕನ್ನರು ಬಳಸುತ್ತಿದ್ದು, ಆದರೆ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಆದರೆ ಟಿಕ್‍ಟಾಕ್‍ನಂಥ ಆಪ್ ಗಳನ್ನು ಬಳಸುವಾಗ ಅಮೆರಿಕನ್ನರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ. ಭಾರತ ಸಹ ಟಿಕ್‍ಟಾಕ್, ಹೆಲೋ ಸೇರಿದಂತೆ ಒಟ್ಟು 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಹಾಗೆ ದೇಶದ ಉದ್ದಿಮೆದಾರರು ಚೀನಾದ ಜೊತೆಗಿನ ವ್ಯವಹಾರದ ಒಪ್ಪಂದಗಳನ್ನು ಮುರಿದುಕೊಳ್ಳುವ ಮೂಲಕ ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸುತ್ತಿದ್ದಾರೆ. ಟಿಕ್‍ಟಾಕ್ ಬ್ಯಾನ್ ಮಾಡಿದ ಪರಿಣಾಮ ಭಾರತದ ಆಪ್ ಗಳ ಬಳಕೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *