ಅಫ್ರಿದಿಯ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

ಮುಂಬೈ: ಟೀಮ್ ಇಂಡಿಯಾ ಹಲವು ಬಾರಿ ನಮ್ಮ ವಿರುದ್ಧ ಸೋಲುಂಡಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರು ಹಿಂದೊಮ್ಮೆ ನನ್ನ ಬಳಿ ಕ್ಷಮೆ ಕೂಡ ಕೇಳಿದ್ದರು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಪಾಕ್ ತಂಡದ ಮಾಜಿ ಆಟಗಾರ ಶಹೀದ್ ಅಫ್ರಿದಿ ಬಗ್ಗೆ ಇದೀಗ ಭಾರತೀಯ ನೆಟ್ಟಿಗರು ಟ್ರೋಲಿಂಗ್ ಆರಂಬಿಸಿದ್ದಾರೆ.
ಶಾಹಿದ್ ಅಫ್ರಿದಿ ಇತ್ತೀಚೆಗಷ್ಟೆ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರ ನಡುವೆಯೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಒಳಗಾಗಿದ್ದಾರೆ. ಕೊರೊನಾ ನಂತರ ಅಫ್ರಿದಿ ತನ್ನ ಮಾನಸಿಕ ಅಸ್ವಸ್ಥಗೊಂಡಿದ್ದಾರೆ ಎಂಬ ಟೀಕೆಯನ್ನು ಕೂಡ ಮಾಡಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅಫ್ರಿದಿ ಕಳೆದ 4 ದಿನಗಳ ಹಿಂದಷ್ಟೇ ಚೇತರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಸಂದರ್ಶನ ನೀಡಿದ್ದ ಅಫ್ರಿದಿ, ಭಾರತ ಕ್ರಿಕೆಟಿಗರ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೇ ಭಾರತ ಆಟಗಾರರು ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ಹೇಳಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಅಭಿಮಾನಿಗಳು ಅಫ್ರಿದಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಭಾರತ ಹಲವು ಪಂದ್ಯಗಳಲ್ಲಿ ಸೋಲುಂಡಿದ್ದು, ಒಮ್ಮೆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡ ಬಳಿಕ ಆಟಗಾರರು ತಮ್ಮ ಕ್ಷಮೆ ಕೇಳಿದ್ದರು ಎಂದು ಹೇಳಿದ್ದಾರೆ. ಟೀಂ ಇಂಡಿಯಾ ವಿರುದ್ಧ ಪಂದ್ಯಗಳನ್ನು ಆಡುವುದನ್ನು ಪಾಕ್ ತಂಡದ ಆಟಗಾರರು ಎಂಜಾಯ್ ಮಾಡುತ್ತಾರೆ. ಹಲವು ಬಾರಿ ನಾವು ಟೀಂ ಇಂಡಿಯಾಗೆ ಸೋಲುಣಿಸಿದ್ದೇವೆ. ಯಾವ ರೀತಿ ಎಂದರೇ? ಒಮ್ಮೆ ಪಂದ್ಯದಲ್ಲಿ ಸೋಲುಂಡ ಟೀಂ ಇಂಡಿಯಾ ಆಟಗಾರರು ಪಂದ್ಯದ ಬಳಿಕ ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ಅಫ್ರಿದಿ ಸಂದರ್ಶನದಲ್ಲಿ ಹೇಳಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದಂತೆ ಭಾರತ ಅಭಿಮಾನಿಗಳು ಕ್ರಿಕೆಟ್ ದಾಖಲೆಗಳನ್ನು ಉದಾಹರಣೆಯಾಗಿ ನೀಡುತ್ತಾ ಅಫ್ರಿದಿ ಕಾಲೆಳೆಯಲು ಆರಂಭಿಸಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅಫ್ರಿದಿ 4 ದಿನಗಳ ಹಿಂದೆಯಷ್ಟೇ ಚೇತರಿಸಿಕೊಂಡಿದ್ದರು. ಪರಿಣಾಮ ವೈರಸ್ ಕಾರಣದಿಂದ ಅಫ್ರಿದಿ ಮೆದುಳಿಗೆ ಸಮಸ್ಯೆ ಉಂಟಾಗಿದೆಯೇ? ಆರ್ ಯು ಓಕೆ..ಅಫ್ರಿದಿ? ನಿನಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯವಿದೆ ಎನಿಸುತ್ತದೆ ಎಂದು ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.