ಅಡ್ಯಾರ್: ಯಾಕೂಬ್ ಹತ್ಯೆಯ ಹಿಂದೆ ನಟೋರಿಯಸ್ ಶಾಕಿರ್ ಕೈವಾಡ!

ಮಂಗಳೂರು: ಅಡ್ಯಾರ್ ನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಮೇಲೆ ಗುಂಪಿನಿಂದ ಹಲ್ಲೆ ನಡೆದು ಹತ್ಯೆ ಮಾಡಲಾಗಿದ್ದು ಕೃತ್ಯದಲ್ಲಿ ಅಡ್ಯಾರ್ ನಿವಾಸಿ ನಟೋರಿಯಸ್ ಕ್ರಿಮಿನಲ್ ಪಂಚಾಯತ್ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡರ ಪುತ್ರ ಶಾಕಿರ್ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಮುಖ ಆರೋಪಿ ಎನ್ನಲಾದ ಶಾಕಿರ್ ತಲೆಮರೆಸಿದ್ದು ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅಡ್ಯಾರ್ ಬಿಜೆಪಿ ಬೆಂಬಲಿತ ಸದಸ್ಯ ಯಾಕುಬ್ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಶಾಕಿರ್ ಮತ್ತಾತನ ತಂಡ ಜಗಳ ಮಾಡಿದ್ದು ಕೊಲೆಯಲ್ಲಿ ಕಂಡಿದೆ. ಶಾಕೀರ್ ಹಲ್ಲೆಗೈದು ನೆಲಕ್ಕೆ ದೂಡಿ ಹಾಕಿ ಎದೆಗೆ ಒದ್ದ ಪರಿಣಾಮ ಯಾಕೂಬ್ ಸಾವು ಸಂಭವಿಸಿದೆ. ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.