ಅಗ್ನಿಶಾಮಕ ದಳದ ವಾಹನ ಕಂಬಕ್ಕೆ ಢಿಕ್ಕಿ: ಸಿಬ್ಬಂದಿ ಪಾರು

ಸುಳ್ಯ: ಇಲ್ಲಿಗೆ ಸಮೀಪದ‌ ಜಾಲ್ಸೂರು ಅಡ್ಕಾರಿನಲ್ಲಿ ಅಗ್ನಿಶಾಮಕ ದಳದ ವಾಹನವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ.

ಅದೃಷ್ಟವಶಾತ್ ಶಾಮಕ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು, ವಾಹನ ಸಂಪೂರ್ಣ ಜಖಂಗೊಂಡಿದೆ.

ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಬಳಿಕ ಮಗುಚಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸ್ಥಳೀಯರು ಸಾಥ್‌ ನೀಡಿದ್ದಾರೆ.

Leave a Reply

Your email address will not be published. Required fields are marked *