ಅಕ್ರಮ ಕಸಾಯಿಖಾನೆಗೆ ದಾಳಿ-ಮೂರು ಜಾನುವಾರುಗಳ ರಕ್ಷಣೆ

ಮೂಡಬಿದ್ರೆ: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಮೂಡಬಿದ್ರೆ ಪೊಲೀಸರು ಮೂರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಇಂದು ಬೆಳಿಗ್ಗೆ ಕೃತ್ಯ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ.
ಇಲ್ಲಿಗೆ ಸಮೀಪದ ಗಂಟಾಲ್‍ಕಟ್ಟೆ ನೀರಲ್ಕೆ ಎಂಬಲ್ಲಿ ಆರೋಪಿ ಮನ್ಸೂರು ಎಂಬಾತ ತನ್ನ ಮನೆಯ ಹಿಂದೆ ಅಕ್ರಮ ಕಸಾಯಿಖಾನೆ ನಿರ್ಮಿಸಿ ಮಾಂಸ ಮಾಡುತ್ತಿದ್ದ. ಈತನೊಂದಿಗೆ ಶೌಕತ್, ಮುಸ್ತಾಕ್ ಉಲಾಯಿಬೆಟ್ಟು ಮತ್ತು ಆಸಿಫ್ ಎಂಬವರು ಜೊತೆ ಸೇರಿದ್ದರು. ಆರೋಪಿಗಳು ಜಾನುವಾರುಗಳನ್ನು ಕದ್ದು ತಂದು ಮಾಂಸ ಮಾಡಿ ದಂಧೆ ನಡೆಸುತ್ತಿದ್ದರು.
ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿ ಮೂರು ಕೋಣಗಳು, ದನದ ಮಾಂಸ ಮತ್ತು ಕೃತ್ಯಕ್ಕೆ ಬಳಸಿದ ಆಯುಧಗಳು ಪತ್ತೆಯಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *