ʻಖಾಸಗಿ ಲೀಗ್‌ಗಳಿಗೆ ಐಸಿಸಿ ಆದ್ಯತೆ ನೀಡದಿರಲಿʼ

ಕರಾಚಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಖಾಸಗಿ ಕ್ರಿಕೆಟ್‌ ಲೀಗ್‌ಗಳಿಗೆ ಐಸಿಸಿ ಆದ್ಯತೆ ನೀಡಬಾರದು ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ ತಿಳಿಸಿದ್ದು, ಈ ಮೂಲಕ ಐಪಿಎಲ್‌ ವಿರುದ್ಧ ಕಿಡಿಕಾರಿದ್ದಾರೆ. ಅಕ್ಟೋಬರ್‌ ೧೮ರಿಂದ ನವೆಂಬರ್‌ ೧೫ರ ವರೆಗೆ ಆಸ್ಟ್ರೇಲಿಯಾದಲ್ಲಿ ಟಿ-ಟ್ವೆಂಟಿ ವಿಶ್ವಕಪ್‌ ಆಯೋಜನೆಯಾಗಿದ್ದು, ಆದರೆ ಮೂಲಗಳ ಪ್ರಕಾರ ಟೂರ್ನಿ ಮುಂದೂಡುತ್ತದೆ ಎನ್ನಲಾಗಿದೆ.
ಕೊರೊನಾ ಮಹಾಮಾರಿಯಿಂದ ಮುಂದೆ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್‌ ಕ್ರಿಕೆಟ್‌ ಮುಂದೂಡಲ್ಪಡುವ ಎಲ್ಲಾ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಆ ವೇಳೆ ಐಪಿಎಲ್‌ ನಡೆಯುವ ಹೆಚ್ಚಿನ ಸಾಧ್ಯತೆ ಇದೆ. ಆದರೆ ಐಪಿಎಲ್‌ ಆಯೋಜಿಸುವ ಸಲುವಾಗಿಯೇ ವಿಶ್ವಕಪ್‌ ಮುಂದೂಡಲಾಗುತ್ತಿದೆ ಎಂದು ಪರೋಕ್ಷವಾಗಿ ಇಂಜಮಾಮ್‌ ಕಿಡಿಕಾರಿದ್ದಾರೆ. ಐಪಿಎಲ್‌ ಹಾಗೂ ಟಿ-ಟ್ವೆಂಟಿ ವಿಶ್ವಕಪ್‌ ನಡುವೆ ವೇಳಾಪಟ್ಟಿ ವಿಚಾರದಲ್ಲಿ ಕದನ ನಡೆಯುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಿಸಿಸಿಐ ಹೆಚ್ಚಿನ ಪ್ರಭಾವವನ್ನು ಹೊಂದಿದೆ. ಒಂದು ವೇಳೆ ಟಿ-ಟ್ವೆಂಟಿ ವಿಶ್ವಕಪ್‌ನ ಜಾಗದಲ್ಲಿ ಐಪಿಎಲ್‌ ಆಯೋಜನೆಗೊಂಡರೆ ಆಗ ಹಲವು ಪ್ರಶ್ನೆಗಳು ಏಳುವುದು ಸಹಜವೇ ಆಗಿದೆ ಎಂದು ಇಂಜಮಾಮ್‌ ತನ್ನ ಯೂಟ್ಯೂಟ್‌ ಚಾನೆಲ್‌ನಲ್ಲಿ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *