4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮೋದಿ ಭಾಷಣ!

ನವದೆಹಲಿ: ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತಾಡಲಿದ್ದಾರೆ. ನಿನ್ನೆಯಷ್ಟೇ ಚೀನಾದ 59 ಆ್ಯಪ್ ಗಳನ್ನು ಕೇಂದ್ರ ಸರಕಾರ ನಿಷೇಧಿಸಿದ್ದು ಚೀನಾ ಜೊತೆಗಿನ ಸಂಬಂಧ ಹದಗೆಟ್ಟಿರುವ ಈ ವೇಳೆ ಮೋದಿ ಮಾತು ಕುತೂಹಲ ಕೆರಳಿಸಿದೆ.
ಪ್ರಧಾನಿ ಕಾರ್ಯಾಲಯ ಈ ಕುರಿತು ಟ್ವೀಟ್ ನಲ್ಲಿ ದೃಢಪಡಿಸಿದ್ದು, ಇಂದು ಮಧ್ಯರಾತ್ರಿ ದೇಶದಲ್ಲಿ ಅನ್ ಲಾಕ್ -1 ಅಂತ್ಯವಾಗಲಿದ್ದು, ಮುಂದಿನ ಅಲ್ ಲಾಕ್ ನಿಯಮಾವಳಿಗಳು ಹಾಗೂ ಕೊರೊನಾ ಹಬ್ಬುತ್ತಿರುವ ಬಗ್ಗೆ ಜನರಿಗೆ ಸಂದೇಶವನ್ನು ಮೋದಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.