33 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಯಲಹಂಕ: ಕ್ಷೇತ್ರದ ಯಲಹಂಕ ಉಪನಗರ ವಾರ್ಡ್ 4ರ ವ್ಯಾಪ್ತಿಯ ‘ಎ’ ಸೆಕ್ಟರ್, ‘ಬಿ’ ಸೆಕ್ಟರ್, ಮಾತೃ ಬಡಾವಣೆ, ಚಿಕ್ಕಬೊಮ್ಮಸಂದ್ರ, ಅಳ್ಳಾಳಸಂದ್ರ, ನ್ಯಾಯಾಂಗ ಬಡಾವಣೆ ಗಳಲ್ಲಿ 25 ಕೋಟಿ ರು.ಅಂದಾಜು ವೆಚ್ಚದ ರಸ್ತೆ, ಚರಂಡಿ, ಕಲ್ವರ್ಟ್ ಕಾಮಗಾರಿಗಳು ಮತ್ತು  8. ಕೋಟಿ ರು. ಅಂದಾಜು ವೆಚ್ಚದ ಬೃಹತ್ ರಸ್ತೆ ಕಾಮಗಾರಿ ಸೇರಿದಂತೆ ಸುಮಾರು 33 ಕೋಟಿ ರು. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ‘ಕೋವಿಡ್-19 ಲಾಕ್ ಡೌನ್ ನಿಂದಾಗಿ, ಕಳೆದ ಮೂರು ತಿಂಗಳಿನಿಂದ ಯಲಹಂಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು.ಮಾನ್ಯ ಮುಖ್ಯಮಂತ್ರಿಗಳು ಕೊರೋನಾ ವಿರುದ್ಧದ ಸಮರದ ಜೊತೆಗೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಮೂರು ತಿಂಗಳ ನಂತರ ಯಲಹಂಕ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಇತ್ತೀಚೆಗಷ್ಟೇ 22 ಕೋಟಿ ರು.ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ, 52 ಕೋಟಿ ರು.ವೆಚ್ಚದಲ್ಲಿ  ಅಟ್ಟೂರು ವಾರ್ಡ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.ಇಂದು ಯಲಹಂಕ ಉಪನಗರ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕಲ್ವರ್ಟ್ ಕಾಮಗಾರಿ, ಬೃಹತ್ ರಸ್ತೆ ಕಾಮಗಾರಿ ಸೇರಿದಂತೆ ಸುಮಾರು 33 ಕೋಟಿ.ರು.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಉಳಿದಂತೆ ಪಾರ್ಕ್ ಗಳ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆ, ಫೌಂಟೇನ್ ಅಳವಡಿಕೆ, ವೃತ್ತಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಅಲ್ಲದೆ ಯಲಹಂಕ ನಗರ ವ್ಯಾಪ್ತಿಯಲ್ಲಿ ಮೂರು ಮೇಲ್ಸೇತುವೆ ಮತ್ತು ಒಂದು ರೈಲ್ವೆ ಕೆಳ ಸೇತುವೆ ನಿರ್ಮಾಣದಂತಹ ಇನ್ನೂ ನಾಲ್ಕು ಬೃಹತ್ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಯಲಹಂಕ ಉಪನಗರ ವಾರ್ಡ್4 ರ ಬಿಬಿಎಂಪಿ ಸದಸ್ಯ ಎಂ.ಸತೀಶ್, ಮಾಜಿ ಸದಸ್ಯ ಎಂ.ಮುನಿರಾಜು, ಬಿಜೆಪಿ ಯಲಹಂಕ ಗ್ರಾಮೀಣ ಮಂಡಲದ ಅಧ್ಯಕ್ಷ ಹೆಚ್.ಬಿ.ಹನುಮಯ್ಯ, ಯಲಹಂಕ ಉಪನಗರ ವಾರ್ಡ್ ಬಿಜೆಪಿ ಅಧ್ಯಕ್ಷ ಎಸ್.ರಾಜಣ್ಣ, ಬಿಜೆಪಿ ಮುಖಂಡರಾದ ರಮೇಶ್, ಶಿವಣ್ಣ(ಬಿಟಿಎಸ್), ವೆಂಕಟೇಗೌಡ, ಮಧುಸೂದನ್, ಸುರೇಶ್, ಸುಬ್ಬಣ್ಣ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಚಿನ್, ಸುಧಾಕರ್, ಕಂಟ್ರ್ಯಾಕ್ಟರ್ ಉಮೇಶ್ ಸೇರಿದಂತೆ ಇನ್ನಿತರರಿದ್ದರು.

ಎದೆಗುಂದದ ಬಿಎಸ್ ವೈ ಕಾರ್ಯವೈಖರಿಗೆ ಶ್ಲಾಘನೆ : ಇಡೀ ರಾಜ್ಯ ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ, ಕೊರೋನಾ ವಿರುದ್ಧ ಸಮರ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಆದಾಯದ ಕೊರತೆ ಎದುರಾಗುತ್ತಿದೆ, ತೆರಿಗೆ ಸಂಗ್ರಹಣೆ ಕಡಿಮೆಯಾಗಿದೆ, ಇದೆಲ್ಲದರ ನಡುವೆಯೂ ಮುಖ್ಯಮಂತ್ರಿ ಬಿ ಎಸ್ ವೈ ಎದೆಗುಂದದೆ ರಾಜ್ಯವನ್ನು ಮುನ್ನಡೆಸುತ್ತಿದ್ದು, ಯಾವ ಕಾರಣಕ್ಕೂ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕುಂಟಿತವಾಗದಂತೆ ನೋಡಿಕೊಳ್ಳಲು ಕರೆ ನೀಡಿರುವ ಬಿಎಸ್ ವೈ ರವರ ಎದೆಗುಂದದ ಕಾರ್ಯವೈಖರಿ ಬಗ್ಗೆ ಹೆಮ್ಮೆ ಇದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಪ್ರಶಂಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *