12 ವರ್ಷಗಳಿಂದ ಆನೆ ಸಾಕಿದ್ದಲ್ಲದೆ 5 ಕೋಟಿ ಆಸ್ತಿಯನ್ನು ಆನೆಗಳ ಹೆಸರಿಗೆ ಬರೆದರು!

ಪಾಟ್ನಾ: ವ್ಯಕ್ತಿಯೊಬ್ಬರು ಕಳೆದ 12 ವರ್ಷಗಳಿಂದ ಎರಡು ಆನೆಗಳನ್ನು ಸಾಕಿದ್ದಲ್ಲದೆ ತಮ್ಮ ಐದು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಎರಡು ಆನೆಗಳ ಹೆಸರಿಗೆ ಬರೆದ ಘಟನೆ ಪಾಟ್ನಾದಲ್ಲಿ ನಡೆದಿದೆ. ಬಿಹಾರ್ ಜಾನಿಪುರದ ಆನೆಗಳ ಪುನರ್ವಸತಿ ಮತ್ತು ವನ್ಯಜೀವಿಗಳ ಟ್ರಸ್ಟ್ ಐರಾವತ್ ಇದರ ಮುಖ್ಯ ವ್ಯವಸ್ಥಾಪಕ ಅಖ್ತರ್ ಇಮಾಮ್ ಅವರು ಮೋತಿ ಹಾಗೂ ರಾಣಿ ಹೆಸರಿನ ಆನೆಗಳ ಹೆಸರಿಗೆ ಈದು ಕೋಟಿ ರೂ ಮೌಲ್ಯದ ಆಸ್ತಿಯನ್ನು ಬರೆದಿದ್ದಾರೆ. ಕೃಷಿ ಭೂಮಿ, ಐಷಾರಾಮಿ ಕೊಟ್ಟಿಗೆ, ಮನೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲವನ್ನೂ ಆನೆಗಳ ಹೆಸರಿಗೆ ಮೀಸಲಿಟ್ಟಿದ್ದಾರೆ.
ಅಖ್ತರ್ ಇಮಾಮ್ ಅಗರ್ಭ ಶ್ರೀಮಂತರಾಗಿದ್ದು 12 ವರ್ಷಗಳ ಹಿಂದೆ ಇವರ ಮೇಲೆ ದರೋಡೆಕೋರರ ಗುಂಪೊಂದು ದಾಳಿ ನಡೆಸಿತ್ತು. ಈ ವೇಳೆ ಮೋತಿ ಮತ್ತು ರಾಣಿ ಹೆಸರಿನ ಆನೆಗಳು ದರೋಡೆಕೋರರನ್ನು ಓಡಿಸಿ ಅಖ್ತರ್ ರನ್ನು ಕಾಪಾಡಿದ್ದವು. ಇದರ ಋಣವೆಂಬಂತೆ ಅಖ್ತರ್ ಕಳೆದ 12 ವರ್ಷಗಳಿಂದ ಆನೆಗಳ ಸೇವೆ ಮಾಡುತ್ತಿದ್ದಾರೆ. ತಮ್ಮ ಗಂಡು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಅವರ ಹೆಸರಿಗೆ ಯಾವುದೇ ಆಸ್ತಿಯನ್ನು ಬರೆಯದೇ ತಮ್ಮ ಅರ್ಧ ಆಸ್ತಿಯನ್ನು ಪತ್ನಿಯ ಹೆಸರಿಗೆ ಬರೆದಿದ್ದಾರೆ. ಐದು ಕೋಟಿ ಆಸ್ತಿಯನ್ನು ಆನೆಗಳ ಹೆಸರಿಗೆ ಬರೆದರೂ ಮತ್ತಷ್ಟು ಬೆದರಿಕೆಗಳು ಬರುತ್ತಿವೆ ಎಂದು ಅಖ್ತರ್ ಅವರು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *