10ನೇ ತರಗತಿ ಸಿಬಿಎಸ್ ಇ ಪರೀಕ್ಷೆ ರದ್ದು

ಹೊಸದಿಲ್ಲಿ: ಜುಲೈ 1ಕ್ಕೆ ನಿಗದಿಯಾಗಿದ್ದ ಸಿಬಿಎಸ್ ಇ ಬೋರ್ಡ್ 10ನೆ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಸಿಬಿಎಸ್ ಇ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ. ದ್ವಿತೀಯ ಪಿಯು ಪರೀಕ್ಷೆಯನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ಪರೀಕ್ಷೆ ಬರೆಯಲು ಬಯಸದ ವಿದ್ಯಾರ್ಥಿಗಳನ್ನು ಕಳೆದ 3 ಶಾಲಾ ಪರೀಕ್ಷೆಗಳ ಅಂಕಗಳ ಆಧಾರದಲ್ಲಿ ಮೌಲ್ಯಮಾಪನ ನಡೆಸಲಾಗುವ ಬಗ್ಗೆ ಯೋಜನೆಯಿದೆ. ವಿದ್ಯಾರ್ಥಿಗಳು ಬೋರ್ಡ್ ನೀಡಿದ ಅಂಕಗಳಿಂದ ಸಂತುಷ್ಟರಾಗದಿದ್ದಲ್ಲಿ, ಮುಂದಿನ ದಿನಗಳಲ್ಲಿ ನಡೆಯುವ ಪರೀಕ್ಷೆಗಳಿಗೆ ಅವರು ಹಾಜರಾಗಬಹುದು ಎಂದು ಅದು ಹೇಳಿದೆ.
ದಿಲ್ಲಿ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳು ಪರೀಕ್ಷೆಗಳನ್ನು ನಡೆಸಲು ಅಸಮರ್ಥತೆಯನ್ನು ವ್ಯಕ್ತಪಡಿಸಿವೆ ಎಂದು ಸಿಬಿಎಸ್ ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್‍ಗೆ ತಿಳಿಸಿದರು. ಜುಲೈ 1ರಿಂದ 15ರ ತನಕ ನಿಗದಿಯಾಗಿದ್ದ ಪರೀಕ್ಷೆಗಳು ರದ್ದಾಗಿವೆ. ಪರಿಸ್ಥಿತಿ ಅನುಕೂಲಕರವಾದಾಗ ಮಂಡಳಿಯು ಪರೀಕ್ಷೆಗಳನ್ನು ನಡೆಸುತ್ತದೆ ಎಂದು ಸಿಬಿಎಸ್‍ಇ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

Leave a Reply

Your email address will not be published. Required fields are marked *