ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ಯಂತಾದ ಕದ್ರಿ ಪಾರ್ಕ್ ರಸ್ತೆ ಕಾಮಗಾರಿ

ಮಂಗಳೂರು: ನಗರದ ಕದ್ರಿಪಾರ್ಕ್‍ನಲ್ಲಿರುವ ಆಕಾಶವಾಣಿಯಿಂದ ಕೊಚ್ಚಿನ್ ಬೇಕರಿವರೆಗಿನ ರಸ್ತೆ ಮುಚ್ಚುವ ಯೋಚನೆಯು ಸ್ಮಾರ್ಟ್ ಸಿಟಿ ಯೋಜನೆಯ 12 ಕೋಟಿ ರೂಪಾಯಿಯನ್ನು ನುಂಗಿ ನೀರು ಕುಡಿಯುವ ಅವೈಜ್ಞಾನಿಕ ಯೋಜನೆ ಎಂದು ಪರಿಸರಪ್ರೇಮಿಗಳು, ಜನಸಾಮಾನ್ಯರು ಕಿಡಿಕಾರಿದ್ದಾರೆ. ಮಂಗಳೂರು ನಗರದಲ್ಲಿ ಹದಿನೆಂಟು ತೆರೆದ ಚರಂಡಿಗಳಿವೆ. ಇದನ್ನು ಸರಿಪಡಿಸುವ ಯೋಜನೆ ರೂಪಿಸಬಹುದು. ಆದರೆ ಈ ಬಗ್ಗೆ ಯೋಚಿಸುವ ಮನಸ್ಸು ಜಿಲ್ಲಾಡಳಿತಕ್ಕೆ ರಾಜಕಾರಣಿಗಳಿಗೆ ಇಲ್ಲ. ಸಣ್ಣ ರಾಜ್ಯಗಳಾದ ಕೇರಳ, ಗೋವಾದಂತಹ ರಾಜ್ಯಗಳು ನದಿ, ಗುಡ್ಡಗಳನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಿ ಆದಾಯವನ್ನು ಗಳಿಸುತ್ತಿವೆ. ನಮ್ಮಲ್ಲಿ ನದಿ, ಗುಡ್ಡಗಳು ಬೇಕಾದಷ್ಟು ಸಂಖ್ಯೆಯಲ್ಲಿ ಇವೆ. ಸುಂದರ ಪರಿಸರವಿದೆ. ಇದೆಲ್ಲವನ್ನೂ ಹಾಳು ಮಾಡುತ್ತಿದ್ದೇವೆ. ಕದ್ರಿಪಾರ್ಕ್‍ನಲ್ಲಿ ರಸ್ತೆ ತಿರುಗಿಸುವ, ಮರ ಕಡಿಯುವ ಅವೈಜ್ಞಾನಿಕ ಯೋಜನೆಗಳಿಗೆ ಹಣ ಸುರಿಯುತ್ತಿರುವುದನ್ನು ನೋಡಿದರೆ ಇದು ಹೊಟ್ಟೆಗೆ ಹಿಟ್ಟಿಲ್ಲದೇ ಇದ್ದರೂ ಜುಟ್ಟಿಗೆ ಮಲ್ಲಿಗೆ ಎಂಬ ಗಾದೆಯ ಮಾತನ್ನು ನೆನಪಿಸುತ್ತಿದೆ ಎಂದು ಪರಿಸರ ಹೋರಾಟಗಾರ ಶಶಿಧರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತ ಸಂಪೂರ್ಣ ಸುದ್ದಿಗಾಗಿ ನಾಳಿನ `ಜಯಕಿರಣ’ ಪತ್ರಿಕೆ ಓದಿ…

Leave a Reply

Your email address will not be published. Required fields are marked *