ಹೆಸರು ಬದಲಿಸಿ ಯುವತಿಯ ಬ್ಲ್ಯಾಕ್ ಮೇಲ್: ಆರೋಪಿ ಸೆರೆ

ಲಕ್ನೋ: ಯುವತಿಯ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಕಾಮುಕನನ್ನು ಉತ್ತರ ಪ್ರದೇಶದ ಮೀರತ್ ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ನಂತರ ಆರೋಪಿಯ ಬಂಧನವಾಗಿದೆ.
ಬಂಧಿತ ಆರೋಪಿಯನ್ನು ವಸೀಮ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತ ತನ್ನನ್ನು ದಿನೇಶ್ ರಾವತ್ ಎಂದು ಸುಳ್ಳು ಹೆಸರು ಹೇಳಿ ಯುವತಿಗೆ ಪರಿಚಯಿಸಿಕೊಂಡಿದ್ದನು. ಅದೇ ಹೆಸರಿನಲ್ಲಿಯೇ ಫೇಸ್‍ಬುಕ್ ಖಾತೆ, ಆಧಾರ್ ಕಾರ್ಡ್ ಸೇರಿದಂತೆ ಹಲವು ಸರ್ಕಾರಿ ದಾಖಲಾತಿಗಳನ್ನು ಮಾಡಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಹಾಪುಡ ಗ್ರಾಮದ ಯುವತಿಯನ್ನು ಪರಿಚಯ ಮಾಡಿಕೊಂಡ ಯುವಕ ಆಕೆಯ ಸ್ನೇಹವನ್ನು ಸಂಪಾದಿಸಿದ್ದಾನೆ. ಹಾಗೇ ತನ್ನ ಬಣ್ಣದ ಮಾತುಗಳಿಂದ ಯುವತಿಯನ್ನು ತನ್ನ ಪ್ರೇಮದ ಬಲೆ ಬೀಳಿಸಿಕೊಂಡು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಕೆಲವು ದಿನಗಳ ನಂತರ ಯುವತಿ ದೈಹಿಕ ಸಂಪರ್ಕಕ್ಕೆ ಹಿಂದೇಟು ಹಾಕಿ ಮದುವೆ ಮಾಡಿಕೊಳ್ಳುವಂತೆ ಪೀಡಿಸಿದ್ದಾಳೆ. ಲೈಂಗಿಕ ಸಂಪರ್ಕಕ್ಕೆ ಹಿಂದೇಟು ಹಾಕಿದ್ದರಿಂದ ಆಕೆಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ದಿನೇಶ್ ಎಂದು ಪರಿಚಯ ಮಾಡಿಕೊಂಡಿದ್ದ ಆರೋಪಿಯ ನಿಜವಾದ ಹೆಸರು ವಸೀಮ್ ಅಹ್ಮದ್. ತನ್ನ ಗುರುತು ಮುಚ್ಚಿಕೊಳ್ಳಲು ದಿನೇಶ್ ರಾವತ್ ಎಂಬ ಹೆಸರಿಲ್ಲಿ ಫೇಸ್‍ಬುಕ್ ಖಾತೆ ತೆರೆದಿದ್ದನು. ಹಾಗೆಯೇ ಕೆಲವು ನಕಲಿ ದಾಖಲಾತಿಗಳನ್ನು ಸಹ ಸಿದ್ಧಪಡಿಸಿಕೊಂಡಿದ್ದನು. ದಾಖಲಾತಿ ಪ್ರಕಾರ ಜಾಕಿರ್ ಕಾಲೋನಿಯ ವಿಜಯ್ ಸಿಂಗ್ ಎಂಬವರ ಪುತ್ರ ದಿನೇಶ್ ಎಂದು ಹೇಳಿಕೊಂಡಿದ್ದನು. ಯುವತಿಯ ಪ್ರಕಾರ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *