ಹುಬ್ಬಳ್ಳಿ: `ಕಾಮಿ ಸ್ವಾಮಿ’ಯ ವಿಡಿಯೋ ವೈರಲ್!
ಹುಬ್ಬಳ್ಳಿ: ಸ್ಥಳೀಯ ಮಠಾಧೀಶರೊಬ್ಬರು ಮಹಿಳೆಯ ಜೊತೆ ಚಕ್ಕಂದ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ. ಮಹಿಳೆಯ ಜೊತೆ ತೀರಾ ಕೊಳಕಾಗಿ ಕಾಮಚೇಷ್ಟೆಯಲ್ಲಿ ನಿರತರಾದ ಸ್ವಾಮಿ ಇನ್ನಿಬ್ಬರು ಸ್ವಾಮಿಗಳ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಸ್ವಾಮಿಯ ಕಾಮಪುರಾಣ ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಣಕವಾಡ ಎಂಬಲ್ಲಿನ ಮಠಾಧೀಶ ಶ್ರೀ ಸಿದ್ದರಾಮ ದೇವರ ನಿರಂಜನ ಸ್ವಾಮಿ ಗೋವಾದಲ್ಲಿ ಮಹಿಳೆಯೊಂದಿಗೆ ನಡೆಸಿದ ರಾಸಲೀಲೆಯ ವೀಡಿಯೋ ಬಹಿರಂಗಗೊಂಡಿದೆ. ಕಾಮಿ ಸ್ವಾಮಿ ಕೇವಲ 5 ವರ್ಷಗಳ ಹಿಂದೆಯಷ್ಟೇ ಮಠಕ್ಕೆ ಬಂದಿದ್ದು ಕಳೆದ ವರ್ಷ ಜನವರಿ 18ರಂದು ಸ್ವಾಮಿಗೆ ಪಟ್ಟಾಭಿಷೇಕ ನಡೆದಿತ್ತು ಎನ್ನಲಾಗಿದೆ. ಆಡಿಯೋದಲ್ಲಿ ಇತರ ಮೂರು ಮಠಾಧೀಶರ ಬಗ್ಗೆ ಹಾಗೂ ಮಾಂಸ, ಮದ್ಯ ಸೇವನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸದ್ಯ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಸ್ವಾಮಿಗಳ ಕಾಮಪುರಾಣ ಸದ್ದು ಮಾಡುತ್ತಿದ್ದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಯಕಿರಣ ಪತ್ರಿಕೆಯ ವಾರ್ತೆಗಳು ಸತ್ಯವಾಗಿಯೇ ಇವೆ.
ಉತ್ತಮ ಮಾಹಿತಿಗಳು ಲಬ್ಯವಾಗುತ್ತಿವೆ.
ಹಾಗಾಗಿ ನಾನು ಈ ಪತ್ರಿಕೆಯನ್ನು ಮೆಚ್ಚುತ್ತೇನೆ.
ನಮಗೆ ಉಡುಪಿ ಬಸ್ ನಿಲ್ದಾಣದಲ್ಲಿ ಪತ್ರಿಕೆ ದೊರೆಯುತ್ತದೆ… ಧನ್ಯವಾದಗಳು.