ಹುತಾತ್ಮ ವೀರಯೋಧ ಸಂದೇಶ್ ಶೆಟ್ಟಿಗೆ ಜೋಗಿಬೆಟ್ಟು ಮಸೀದಿಯಿಂದ ಅಂತಿಮ‌ ನಮನ

ಉಪ್ಪಿನಂಗಡಿ: ಹೃದಯಾಘಾತದಿಂದ ಮೃತಪಟ್ಟ ಭಾರತೀಯ ಸೇನೆಯ ಯೋಧ ಸಂದೇಶ್ ಶೆಟ್ಟಿ (34) ಅವರಿಗೆ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯ ಎದುರು ಅಂತಿಮ ನಮನ ಸಲ್ಲಿಸಲಾಯಿತು.
ರಜೆಯಲ್ಲಿ ಊರಿಗೆ ಬಂದಿದ್ದ ಅವರು ಸೋಮವಾರ ಕರ್ತವ್ಯಕ್ಕೆಂದು ಉತ್ತರ ಪ್ರದೇಶದ ಮಥುರಾಕ್ಕೆ ತೆರಳಿದ್ದು, ಅಲ್ಲಿ ಕ್ವಾರೆಂಟೈನ್ ಕೇಂದ್ರದಲ್ಲಿರುವಾಗ  ಹೃದಯಾಘಾತದಿಂದ ಮೃತಪಟ್ಟಿದ್ದರು. ವೀರ ಯೋಧನ ಪಾರ್ಥಿವ ಶರೀರ ತರುತ್ತಿರುವ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಮಸೀದಿಯ ಅಧ್ಯಕ್ಷರು, ಧರ್ಮಗುರುಗಳ ಸಮ್ಮುಖದಲ್ಲಿ‌ ಜನರು ರಾಷ್ಟ್ರಧ್ವಜ ಹಿಡಿದು ‘ಭಾರತ್ ಮಾತಾಕೀ ಜೈ’ ಘೋಷಣೆ ಕೂಗತೊಡಗಿದರು. ಜನರನ್ನು ಕಂಡು ಆಂಬ್ಯುಲೆನ್ಸ್ ನಿಲ್ಲಿಸಲಾಯಿತು. ಈ ಸಂದರ್ಭ ಸಾಮಾಜಿಕ ಅಂತರ ಕಾಪಾಡಿ, ಒಬ್ಬೊಬ್ಬರೇ ಬನ್ನಿ ಎಂದು ಪೊಲೀಸರು ಮೈಕ್ ಮೂಲಕ ಘೋಷಿಸಿದರು. ಬಳಿಕ ಸೇರಿದ ಜನರು ಅಂತಿಮ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *