ಹುತಾತ್ಮ ಯೋಧರಿಗೆ ಕುರ್ನಾಡು ಫ್ರೆಂಡ್ಸ್ ಸರ್ಕಲ್ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ
ಮಂಗಳೂರು: ಕಳೆದ ವಾರ ಚೀನಾ-ಭಾರತ ಗಡಿಯಲ್ಲಿ ಯೋಧರ ನಡುವೆ ಸಂಘರ್ಷದಲ್ಲಿ ಬಲಿದಾನಗೈದ ಯೋಧರಿಗೆ ಕುರ್ನಾಡು ಫ್ರೆಂಡ್ಸ್ ಸರ್ಕಲ್(ರಿ.) ಹಾಗೂ ಕೆ.ಎಫ್.ಸಿ. ಮಹಿಳಾ ಸಂಘ ಕುರ್ನಾಡು ಇದರ ವತಿಯಿಂದ ಶ್ರದ್ದಾಂಜಲಿ ಅರ್ಪಣೆ ಕಾರ್ಯಕ್ರಮ ಇಂದು ಕುರ್ನಾಡಿನ ಕೆ.ಎಫ್.ಸಿ. ಸಭಾಭವನದಲ್ಲಿ ಜರುಗಿತು.
ಭಾರತದ ಯೋಧರ ಮೇಲೆ ಚೀನಾ ಸೈನಿಕರು ಅಮಾನುಷ ಕೃತ್ಯವನ್ನು ಎಸಗಿ ಸೈನಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿರುವುದನ್ನು ಖಂಡಿಸಿ ಹುತಾತ್ಮ ಯೋಧರನ್ನು ಸ್ಮರಿಸಲಾಯಿತು.
ಅಗಲಿದ 20 ಯೋಧರ ಆತ್ಮಕ್ಕೆ ಶಾಂತಿಸಿಗಲಿ ಎಂಬ ಪ್ರಾರ್ಥನೆಯೊಂದಿಗೆ ಹಿರಿಯರಾದ ಟಿ.ಜಿ ರಾಜರಾಮಭಟ್, ಗಣೇಶ್ ಕಡೇಶಿವಾಲಯ, ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರದೀಪ್ ಶೆಟ್ಟಿ ಕುರ್ನಾಡು, ನವೀನ್ ಪಾದಲ್ಪಾಡಿ, ನವೀನ್ ಶೆಟ್ಟಿ ಕೊಡಕ್ಕಲು ಯೋಧರಿಗೆ ಪುಷ್ಪಾರ್ಚನೆ ಹಾಗೂ ನುಡಿನಮನ ಸಲ್ಲಿಸಿದರು. ಕೆ.ಎಫ್.ಸಿ.ಯ ಸರ್ವ ಸದಸ್ಯರು ಹಾಗೂ ಕೆ.ಎಫ್.ಸಿ. ಮಹಿಳಾ ಸಂಘದ ಸದಸ್ಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
