ಹಿರೇಬಂಡಾಡಿ: ಕಾರ್ಮಿಕನಲ್ಲಿ ಕೊರೊನಾ ಪಾಸಿಟಿವ್, ಗ್ರಾಮಸ್ಥರಲ್ಲಿ ಆತಂಕ
ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳ್ಳೆಜಾಲು 25 ವರ್ಷದ ಯುವಕ ಕಳೆದ 5 ದಿನಗಳ ಹಿಂದೆ ತೀವ್ರ ಜ್ವರದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಆತನಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಅದರಂತೆ ಕೊಯಿಲ ಸರಕಾರಿ ಆಸ್ಪತ್ರೆಯ ವೈದ್ಯರು, ಕಂದಾಯ ನಿರೀಕ್ಷಕರಾದ ವಿಜಯ ವಿಕ್ರಮ, ಗ್ರಾಮ ಕರಣಿಕರಾದ ರಮಾನಂದ ಚಕ್ಕಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಹಮ್ಮಬ್ಬ ಶೌಕತಾಲಿ ಹಾಗೂ ಪೋಲೀಸರು ವ್ಯಕ್ತಿಯ ಮನೆಗೆ ತೆರಳಿ ಇತರ ಸದಸ್ಯರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದ್ದಾರೆ.