ಹಿಜ್ಬುಲ್ ಕಮಾಂಡರ್ ಸಹಿತ ಮೂವರು ಉಗ್ರರ ಹತ್ಯೆ!

ಶ್ರೀನಗರ: ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹಿಝ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸಹಿತ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆದಿದೆ. ಮಸೂದ್ ಅಹ್ಮದ್ ಭಟ್ ಹಾಗೂ ಇತರ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಮಸೂದ್ ಸಾವಿನೊಂದಿಗೆ ಜಮ್ಮು ವಲಯದ ದೋಡಾ ಜಿಲ್ಲೆಯೀಗ ಉಗ್ರರಿಂದ ಮುಕ್ತವಾಗಿದೆ. ಅಹ್ಮದ್ ಆ ವಲಯದಲ್ಲಿ ಸಕ್ರಿಯನಾಗಿದ್ದ ಕೊನೆಯ ಉಗ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಉಗ್ರರ ಬಳಿಯಿದ್ದ ಒಂದು ಎಕೆ ರೈಫಲ್ ಹಾಗೂ ಎರಡು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.