ಹಾಡಹಗಲೇ 60 ಗ್ರಾಂ ಚಿನ್ನ ಕಳವು

ಬೆಳ್ತಂಗಡಿ: ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಕುಕ್ಕುಳ ಗ್ರಾಮದ ಪುರುಷೋತ್ತಮ ಗೌಡ ಎಂಬವರ ಮನೆಗೆ ಹಾಡುಹಗಲೇ ನುಗ್ಗಿದ ಕಳ್ಳರು 60 ಗ್ರಾಂ ಚಿನ್ನ ದೋಚಿ ಪರಾರಿಯಾದ ಘಟನೆ ಬುಧವಾರದಂದು ನಡೆದಿದೆ. ಪುರುಷೋತ್ತಮ ಗೌಡರು ಮನೆಯಲ್ಲಿಲ್ಲದ ವೇಳೆಯನ್ನು ಗಮನಿಸಿ ಬೆಳಗ್ಗಿನ 9 ಗಂಟೆಯಿಂದ 1.30ರ ಒಳಗೆ ಈ ಘಟನೆ ನಡೆದಿದ್ದು, ಇವರ ಚಲನವಲನ ಗಮನಿಸಿಯೇ ಕಳ್ಳರು ಕೈಚಳಕ ತೋರಿಸಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ. ಕಳವಾದ 60 ಗ್ರಾಂ ಚಿನ್ನದ ಮೌಲ್ಯ 1 ಲಕ್ಷದ 80 ಸಾವಿರ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *