ಹಳೆ ಟಿ.ವಿ.ಯಲ್ಲಿ ಬೆಲೆಬಾಳುವ ರೆಡ್ ಮರ್ಕ್ಯೂರಿ ಹುಡುಕುತ್ತಿರುವ ಕಾಳ ದಂಧೆಕೋರರು!

ಕುಂದಾಪುರ: ಹಳೆ ಗ್ಯಾಸ್ ಲೈಟ್, ಎರಡು ತಲೆ ಹಾವು, ಮಂದಿರದ ಗೋಪುರಗಳಲ್ಲಿ ಆಳವಡಿಸಲಾಗುವ ಕಳಸಗಳ ನಂತರ ಇದೀಗ ಮರದ ಬಾಡಿ ಹೊಂದಿರುವ ಅತ್ಯಂತ ಹಳೆ ಟಿವಿಗಳಿಗೆ ಬಂಗಾರದ ಬೆಲೆಗೆ ಖರೀದಿಸುವ ನೆಟ್ವರ್ಕ್ ಒಂದು ಸದ್ದಿಲ್ಲದೆ ಕಾರ್ಯಾಚರಿಸುತ್ತಿರುವ ಸುದ್ದಿ ಬೆಳಕಿಗೆ ಬಂದಿದೆ.
ನಿಮ್ಮ ಮನೆಯಲ್ಲೇನಾದ್ರೂ ಹಳೆಯ ಕಾಲದ ಮರದ ಬಾಡಿ ಹೊಂದಿರುವ ಟಿವಿ ಇದ್ದರೆ ಕೊಡಿ. ನಿಮಗೆ ಹೊಸ ಎಲ್ಇಡಿ ಟಿವಿ ಕೊಡ್ತೇವೆ ಅಂತಾ ಯಾರಾದ್ರೂ ಹೇಳಿದ್ರೆ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ. ಮರದ ಡೋರ್ ಹೊಂದಿರುವ ಟಿವಿ ಖರೀದಿಸಿ ದೇಶದ್ರೋಹದ ಕೃತ್ಯವೆಸಗುವ ಜಾಲವೊಂದು ರಾಜ್ಯದಲ್ಲಿ ಸಕ್ರೀಯವಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ. ಒಂದೊಮ್ಮೆ ಹೊಸ ಟಿವಿಯ ಆಸೆಗೆ ಬಲಿಬಿದ್ದು ಹಳೆಯ ಟಿವಿ ಮಾರಾಟ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಹಿಂದಿನ ಕಾಲದಲ್ಲಿ ಮರದ ಡೋರ್ ಹೊಂದಿರುವ ಟಿವಿ ಮತ್ತು ರೆಡಿಯೋ ಬಳಕೆಯಲ್ಲಿತ್ತು. ದಿನ ಕಳೆದಂತೆ ಟಿವಿಯ ಡಿಸೈನ್ನಲ್ಲಿ ಬಾರೀ ಬದಲಾವಣೆಯಾಗಿತ್ತು. ಆದರೆ ಎರಡು ದಶಕಗಳಿಗೂ ಹಿಂದೆ ಬಳಕೆಯಲ್ಲಿದ್ದ ಮರದ ಡೋರ್ ಹೊಂದಿರುವ ಟಿವಿ ಹಾಗೂ ರೆಡಿಯೋಗೆ ಬಾರೀ ಡಿಮ್ಯಾಂಡ್ ಬಂದಿದೆ. ಹಲವು ಕಡೆಗಳಲ್ಲಿ ಕಾರ್ಯ ನಿರ್ವಹಿಸದ ಹಳೆಯ ಟಿವಿಗಳಿಗೆ 10 ಸಾವಿರ ರೂಪಾಯಿಯಿಂದ 20 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡುವುದಾಗಿಯೂ ಹೇಳುತ್ತಿದ್ದಾರಂತೆ. ಅಷ್ಟಕ್ಕೂ ಈ ಹಳೆಯ ಕಾಲದ ಮರದ ಡೋರ್ ಇರುವ ಟಿ.ವಿ.ಗೆ ಅಷ್ಟೊಂದು ಡಿಮ್ಯಾಂಡ್ ಬರೋದಕ್ಕೆ ಕಾರಣವಾಗಿರೋದು ಏನ್ ಗೊತ್ತಾ? ಅದೇ ರೆಡ್ ಮರ್ಕ್ಯೂರಿ
ದೇಶದಲ್ಲಿ ರೆಡ್ ಮಕ್ರ್ಯೂರಿ ಖರೀದಿ ಹಾಗೂ ಮಾರಾಟಕ್ಕೆ ನಿಷೇಧವಿದೆ. ಒಂದೊಮ್ಮೆ ರೆಡ್ ಮಕ್ರ್ಯೂರಿ ಮಾರಾಟ ಮಾಡುವುದು ಅಥವಾ ಖರೀದಿ ಮಾಡೋದು ಪತ್ತೆಯಾದ್ರೆ ಕಠಿಣ ಶಿಕ್ಷೆಗೆ ಗುರಿಯಾಗುಬೇಕಾಗುತ್ತದೆ. ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಬಳಕೆಯಾಗುವ ರೆಡ್ ಮರ್ಕ್ಯೂರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರೀ ಡಿಮ್ಯಾಂಡ್ ಇದೆ. ಹಲವು ತಜ್ಞರು ಹೇಳುವ ಪ್ರಕಾರ 1 ಕೆ.ಜಿ.ಗೆ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಬೆಲೆ ಬಾಳುತ್ತಂತೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಿರುವ ರೆಡ್ ಮಕ್ರ್ಯೂರಿಗಾಗಿ ಇದೀಗ ದಂಧೆಕೋರರು ಮರದ ಡೋರ್ ಹೊಂದಿರುವ ಟಿವಿಯ ಬೆನ್ನು ಬಿದ್ದಿದ್ದಾರೆ. ಹಿಂದಿನ ಕಾಲದಲ್ಲಿ ರೆಡ್ ಮಕ್ರ್ಯೂರಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುತ್ತಿತ್ತು.
ಹೀಗಾಗಿಯೇ ಅಂದಿನ ಕಾಲದಲ್ಲಿ ತಯಾರಾಗುತ್ತಿದ್ದ ಟಿವಿಗಳ ಮದರ್ ಬೋರ್ಡ್ನಲ್ಲಿ ಕನೆಕ್ಟರ್ ಆಗಿ ರೆಡ್ ಮಕ್ರ್ಯೂರಿಯನ್ನು ಬಳಕೆ ಮಾಡಲಾಗುತ್ತಿತ್ತು. ಆದ್ರೀಗ ರೆಡ್ ಮರ್ಕ್ಯೂರಿ ಬೆಲೆ ಕೋಟಿಗೆ ದಾಟುತ್ತಲೇ ಟಿವಿ ತಯಾರಿಕಾ ಕಂಪೆನಿಗಳು ರೆಡ್ ಮಕ್ರ್ಯೂರಿ ಬಳಕೆ ಮಾಡುತ್ತಿಲ್ಲ. ದಂಧೆಕೋರರು ಇದೀಗ ಹಳೆಯ ಮರದ ಡೋರ್ ಹೊಂದಿರುವ ಟಿವಿಗಳನ್ನ ಹುಡುಕಾಡುವ ಕಾರ್ಯವನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಇಂತಹದೊಂದು ದಂಧೆ
ಸದ್ದಿಲ್ಲದೆ ನಡೆಯುತಲಿದ್ದು, ಯಾತಕ್ಕೂ ಪ್ರಯೋಜನ ವಿಲ್ಲದ ಹಳೆ ಡಬ್ಬಾ ಟಿವಿಯ ಬದಲಿಗೆ ಹೊಸ ಎಲ್ಇಡಿ ಟಿವಿ ಕೊಡುತ್ತೇವೆ ಎಂದು ಆಮಿಷವೊಡ್ಡಲಾಗುತ್ತಿರುವ ಪ್ರಕರಣಗಳು ಸದ್ದಿಲ್ಲದೆ ನಡೆಯುತ್ತಿವೆ ಎಂದು ವ್ಯಾಪಕವಾಗಿ ಕೇಳಿ ಬರುತ್ತಿದೆ. ಅದರಲ್ಲೂ ಹಳ್ಳಿ ಭಾಗದಲ್ಲಿರುವ ಸಿರಿವಂತ ಮನೆಗಳಿಗೆ ಭೇಟಿ ನೀಡಿ ಹಳೆ ಟಿವಿಗಳನ್ನು ಕಲೆ ಹಾಕುವ ವಿದ್ಯಮಾನಗಳು ಜರಗುತ್ತಲಿವೆ ಎಂದು ಹೇಳಲಾಗುತ್ತಿದೆ.