ಹಲಸಿನ ಹಣ್ಣಲ್ಲಿ ವಿಷ ಬೆರೆಸಿ ಮೂರು ಗೋವುಗಳ ಹತ್ಯೆ!

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಗೋವುಗಳನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಸರವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ದುಷ್ಕರ್ಮಿಗಳು ಹಲಸಿನ ಹಣ್ಣಿಗೆ ವಿಷ ಬೆರೆಸಿ ಮೂರು ದನಗಳನ್ನು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಟ್ಟೆಗೌಡ ಹಾಗೂ ಮಧು ಎಂಬರಿಗೆ ಸೇರಿದ ಮೂರು ದನಗಳು ಹಲಸಿನ ಹಣ್ಣು ತಿಂದು ಸಾವನ್ನಪ್ಪಿವೆ.
ತೋಟಕ್ಕೆ ದನಗಳು ನುಗ್ಗಿ ಹಾವಳಿಯನ್ನುಂಟು ಮಾಡುತ್ತಿವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಹಲಸಿನ ಹಣ್ಣಿಗೆ ವಿಷ ಬೆರೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *