ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯ!

ಮಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಡಳಿತ ಕಚೇರಿ, ಮಂಗಳೂರು ವತಿಯಿಂದ ಜೂನ್ 26, 2020ರಂದು ಅಂತಾರಾಷ್ಟ್ರೀಯ ಎಂಎಸ್‍ಎಂಇ ದಿನದ ಅಂಗವಾಗಿ ಬ್ಯಾಂಕ್‍ನ ಆಡಳಿತ ಕಚೇರಿಯಲ್ಲಿ ಇ-ಟೌನ್ ಹಾಲ್ ಸಭೆ ಆಯೋಜಿಸಲಾಗಿತ್ತು. ಮಂಗಳೂರಿನಲ್ಲಿರುವ ಬ್ಯಾಂಕ್‍ನ ವಿವಿಧ ಶಾಖೆಗಳ ಎಂಎಸ್‍ಎಂಇ ಗ್ರಾಹಕರನ್ನು ಈ ಸಭೆಯಲ್ಲಿ ಭಾಗವಹಿಸಲು ಆಹ್ವಾಹಿಸಲಾಗಿತ್ತು. ಬ್ಯಾಂಕ್‍ನ ಮಂಗಳೂರು, ಹಾಸನ, ಉಡುಪಿ ಹಾಗೂ ತುಮಕೂರಿನ ಇತರ ಪ್ರಾದೇಶಿಕ ವ್ಯವಹಾರ ಕಚೇರಿಗಳಲ್ಲೂ (ಆರ್‍ಬಿಒ)ಗಳಲ್ಲೂ ಪ್ರಾದೇಶಿಕ ಪ್ರಬಂಧಕರ ಉಪಸ್ಥಿತಿಯಲ್ಲಿ ಈ ಸಭೆಯನ್ನು ಏಕಕಾಲದಲ್ಲಿ ನಡೆಸಲಾಯಿತಲ್ಲದೆ ಆಯಾಯ ಶಾಖೆಗಳ ಎಂಎಸ್‍ಎಂಇ ಗ್ರಾಹಕರಿಗೂ ಆಹ್ವಾನ ನೀಡಲಾಗಿತ್ತು. ಶ್ರೀ ರಾಜೇಶ್ ಗುಪ್ತಾ, ಉಪ ಮಹಾಪ್ರಬಂಧಕರು ಉದ್ಘಾಟನಾ ಭಾಷಣ ಮಾಡಿದರು. ಭಾರತ ಸರಕಾರದ ಗ್ಯಾರೆಂಟೀಡ್ ಎಮರ್ಜನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ಯೋಜನೆಯಡಿಯಲ್ಲಿ ಎಂಎಸ್‍ಎಂಇ ವಲಯವನ್ನು ಪ್ರೋತ್ಸಾಹಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರಲ್ಲದೆ ಈ ನಿಟ್ಟಿನಲ್ಲಿ ಮುಖ್ಯವಾಗಿ ಮಂಗಳೂರು ಆಡಳಿತ ಕಚೇರಿ ವ್ಯಾಪ್ತಿಯಡಿ ಬರುವ ವಿವಿಧ ಶಾಖೆಗಳ ಶ್ರಮವನ್ನು ಅವರು ಈ ಸಂದರ್ಭ ಉಲ್ಲೇಖಿಸಿದರು. ಬ್ಯಾಂಕ್ ಜಿಇಸಿಎಲ್ ಯೋಜನೆಯಡಿ 25.06.2020ರ ವರೆಗೆ ರೂ 18,251.06 ಕೋಟಿ ಮೊತ್ತದ ಒಟ್ಟು 357415 ಸಾಲಗಳನ್ನು ಮಂಜೂರುಗೊಳಿಸಿದೆ. ಮಂಗಳೂರಿನಲ್ಲಿರುವ ಆಡಳಿತ ಕಚೇರಿ ವ್ಯಾಪ್ತಿಯಲ್ಲಿ ಬರುವ ಶಾಖೆಗಳು 25.06.2020ರ ವರೆಗೆ ರೂ 148.86 ಕೋಟಿ ಮೊತ್ತದ 2292 ಸಾಲಗಳನ್ನು ಮಂಜೂರು ಮಾಡಿವೆ. ಎಂಎಸ್‍ಎಂಇ ಘಟಕಗಳ ಅಗತ್ಯತೆಗೆ ತಕ್ಕಂತೆಯೇ ಜಾರಿಗೊಳಿಸಲಾಗಿರುವ ಜಿಇಸಿಎಲ್ ಯೋಜನೆಯ ಪ್ರಯೋಜನ ಪಡೆಯುವಂತೆ ಅವರು ಗ್ರಾಹಕರಿಗೆ ಸಲಹೆ ನೀಡಿದರು. ಬಡ್ಡಿ ದರವೂ ಕಡಿಮೆಯಾಗಿದ್ದು ಸಾಲದ ಮೊತ್ತಕ್ಕೆ ಸರಕಾರದ ಜಾಮೀನು ಇರುವುದರಿಂದ ಹೆಚ್ಚುವರಿ ಭದ್ರತೆಯ ಅಗತ್ಯವಿಲ್ಲ, ಎಂದು ಅವರು ವಿವರಿಸಿದರು. ಕೋವಿಡ್-19 ನಂತರದ ಸನ್ನಿವೇಶದಲ್ಲಿ ತಮ್ಮ ಉದ್ಯಮಗಳನ್ನು ಪುನಶ್ಚೇತನಗೊಳಿಸಲು ಎಂಎಸ್‍ಎಂಇ ಕ್ಷೇತ್ರಕ್ಕೆ ನೆರವಾಗಲೆಂದು ಜಾರಿಗೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಯೋಜನೆಗಳಾದ ಗ್ಯಾರೆಂಟೀಡ್ ಎಮರ್ಜನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್), ಕಾಮನ್ ಕೋವಿಡ್-19 ಎಮರ್ಜನ್ಸಿ ಕ್ರೆಡಿಟ್ ಲೈನ್ (ಸಿಸಿಇಸಿಎಲ್), ಲಿಬರಲೈಸ್ಡ್ ವರ್ಕಿಂಗ್ ಕ್ಯಾಪಿಟಲ್ ಅಸ್ಸೆಸ್ಮೆಂಟ್ ಸ್ಕೀಂ, ಇ-ಡಿಎಫ್‍ಎಸ್, ಕಾಂಟ್ಯಾಕ್ಟ್‍ಲೆಸ್ ಲೆಂಡಿಂಗ್ ಪ್ಲಾಟ್‍ಫಾರ್ಮ್ (ಸಿಎಲ್‍ಪಿ), ಇ-ಮುದ್ರಾ, ಪ್ರಿ-ಅಪ್ರೂವ್ಡ್ ಮರ್ಚೆಂಟ್ ಲೋನ್ (ಪಿಎಎಂಎಲ್), ಸ್ಟ್ಯಾಂಡ್ ಅಪ್ ಇಂಡಿಯಾ ಹಾಗೂ ಇತ್ತೀಚೆಗೆ ಜಾರಿಗೊಳಿಸಲಾದ ಚಿನ್ನದ ಸಾಲ ಯೋಜನೆಯ ಕುರಿತು ಈ ಸಂದರ್ಭ ಪ್ರಸ್ತುತಪಡಿಸಲಾಯಿತು. ಎಂಎಸ್‍ಎಂಇ ಕ್ಷೇತ್ರದ ಪ್ರಯೋಜನಕ್ಕಾಗಿ ಎಸ್‍ಬಿಐ ಹಾಗೂ ಭಾರತ ಸರಕಾರ ಜಾರಿಗೊಳಿಸಿರುವ ಯೋಜನೆಗಳ ಕುರಿತು ಮಾಹಿತಿಯನ್ನು ಪಡೆದ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಹರ್ಷ ವ್ಯಕ್ತಪಡಿಸಿದರು. ಈ ಮಾಹಿತಿಯನ್ನು ಇತರ ಎಂಎಸ್‍ಎಂಇ ಗ್ರಾಹಕರ ಜತೆಗೂ ಹಂಚಿಕೊಂಡು ಯೋಜನೆಯ ಲಾಭ ಹೆಚ್ಚು ಜನರಿಗೆ ತಲುಪುವಂತೆ ಮಾಡಿ ಆರ್ಥಿಕ ಪುನಶ್ಚೇತನಕ್ಕೆ ಸಹಕಾರಿಯಾಗುವಂತೆ ಮಾಡಲು ಶ್ರಮಿಸುವುದಾಗಿ ಎಲ್ಲಾ ಗ್ರಾಹಕರೂ ಭÀರವಸೆ ನೀಡಿದರು.

Leave a Reply

Your email address will not be published. Required fields are marked *