`ಸೋಂಕಿತರ ಶವದಿಂದ ಸೋಂಕು ಹರಡಲ್ಲ, ಹಾಗಾಗಿ ಹೋಗಿದ್ದೆ’ -ಯು.ಟಿ.ಖಾದರ್
ಮಂಗಳೂರು: ಬೋಳಾರದ ಕೊರೊನಾ ಸೋಂಕಿತರು ನಿನ್ನೆ ಮೃತಪಟ್ಟ ಸಂದರ್ಭ ದಫನಕಾರ್ಯಕ್ಕೆ ಬೋಳಾರ ಮಸೀದಿಯಲ್ಲಿ ಕೈಜೋಡಿಸಿದ್ದ ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. `ಕೊರೊನಾ ಸೋಂಕಿತರು ಸತ್ತಾಗ ಅವರ ದೇಹದಿಂದ ಇನ್ನೊಬ್ಬರಿಗೆ ವೈರಸ್ ಹರಡುವುದಿಲ್ಲ. ಈ ಬಗ್ಗೆ ವೈದ್ಯಕೀಯ ವಿಜ್ಞಾನ ಕೂಡಾ ಹೇಳಿಲ್ಲ. ಆದ್ದರಿಂದ ಶವವನ್ನು ಖಬರ್ ಸ್ಥಾನಕ್ಕೆ ತಂದು ದಫನ ಮಾಡುವಾಗ ಜನಪ್ರತಿನಿಧಿಯಾಗಿ ಪಾಲ್ಗೊಂಡಿದ್ದೆ’ ಎಂದಿದ್ದಾರೆ.
ಶವದಿಂದ ಕೊರೊನಾ ಹರಡುವುದಿಲ್ಲ, ವೈರಸ್ ಕೂಡಾ ಸಾಯುತ್ತದೆ. ಆದ್ದರಿಂದ ಶವ ಹೂಳುವಾಗ ಅಥವಾ ಸುಡುವಾಗ ಪಿಪಿಇ ಕಿಟ್ ಧರಿಸದಿದ್ದರೆ ಏನೂ ಆಗುವುದಿಲ್ಲ ಎಂದು ಶಾಸಕ ಖಾದರ್ ಸ್ಪಷ್ಟಪಡಿಸಿದ್ದಾರೆ.
