ಸುರತ್ಕಲ್ ಫ್ಲೈ ಓವರ್ ಗೂ “ಭಗತ್ ಸಿಂಗ್” ಹೆಸರು!

ಮಂಗಳೂರು: ನಗರದ ಪಂಪ್ ವೆಲ್ ಸಹಿತ ಕೆಲವು ಫ್ಲೈ ಓವರ್, ಮೈದಾನಗಳಿಗೆ ಹೊಸ ಹೆಸರು ಇಡುತ್ತಿರುವ ಕಾಣದ ಕೈಗಳು ನಿನ್ನೆ ತಡರಾತ್ರಿ ಸುರತ್ಕಲ್ ಫ್ಲೈ ಓವರ್ ಮೇಲೂ ಭಗತ್ ಸಿಂಗ್ ಹೆಸರಿನ ಫ್ಲೆಕ್ಸ್ ಬ್ಯಾನರ್ ಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಜರಂಗದಳ ಸಂಘಟನೆ ಹೆಸರಿನಲ್ಲಿ ಮೆಸೇಜ್ ಹರಿದಾಡುತ್ತಿದ್ದು ಸಂಘಟನೆ ಬ್ಯಾನರ್ ಹಾಕಿದೆ, ಇನ್ನು ಮುಂದೆಯೂ ತುಳುನಾಡಿನ ವೀರ ಪುರುಷರ ಹೆಸರನ್ನು ಇಡುವ ಕೆಲಸ ಮುಂದುವರಿಯಲಿದೆ ಎಂದು ಹೇಳಿದೆ.