`ಸೀಲ್ ಡೌನ್’ ಆಗದ ಜಿಂದಾಲ್: ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆಯೇ ಇಲ್ಲ!
ಬಳ್ಳಾರಿ: ಜಿಂದಾಲ್ ಸ್ಟೀಲ್ ಕಂಪೆನಿಯ 178 ನೌಕರರಿಗೆ ಕೊರೊನಾ ಮಹಾಮಾರಿ ತಗಲಿರುವ ಹಿನ್ನೆಲೆಯಲ್ಲಿ ಕಂಪೆನಿಯ ಟೌನ್ ಶಿಪ್ ಲಾಕ್ ಮಾಡಿ ಹಿಹೊರಗಿನವರು ಒಳಗೆ ಬರುವುದನ್ನು ತಡೆಯಲು ಸೀಲ್ ಡೌನ್ ಮಾದರಿ ಕ್ರಮ ಅನುಸರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದರೆ ಜಿಂದಾಲ್ ನಲ್ಲಿ ಕೆಲಸ ಸರಾಗವಾಗಿ ನಡೆಯುತ್ತಿದ್ದು ಕಾರ್ಮಿಕರು ಎಂದಿನಂತೆ ತೆರಳುತ್ತಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.
ಜಿಂದಾಲ್ ನೌಕರರು ಬೇರೆ ಕಡೆಗೆ ಸಂಚಾರ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಟೌನ್ಶಿಪ್ ಲಾಕ್ ಡೌನ್ ಮಾಡುವಂತೆ ಬಳ್ಳಾರಿ ಜಿಲ್ಲಾಡಳಿತ ಆದೇಶ ಮಾಡಿತ್ತು. ಜಿಲ್ಲಾಧಿಕಾರಿಯವರ ಆದೇಶದನ್ವಯ ಜಿಂದಾಲ್ ಟೌನ್ಶಿಪ್ ನಲ್ಲಿರುವ ಉದ್ಯೋಗಿಗಳಿಂದ ಮಾತ್ರ ಕಂಪನಿ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಆದರೆ ಆದೇಶ ಮೀರಿ ಜಿಂದಾಲ್ ನ ಇಸಿಪಿಎಲ್ ಸಿಬ್ಬಂದಿ ಕೆಲಸಕ್ಕೆ ಹೋಗುತ್ತಿದ್ದಾರೆ. ಜಿಂದಾಲ್ ನಲ್ಲಿ 178 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಬಳ್ಳಾರಿ ಜಿಲ್ಲಾಡಳಿತದಿಂದ ಜಿಂದಾಲ್ ಸೀಲ್ ಡೌನ್ ಮಾದರಿ ಅನುಸರಿಸಲು ಆದೇಶ ಮಾಡಿತ್ತು. ಜಿಂದಾಲ್ ಸುತ್ತಲಿನ ವಾಸವಾಗಿರುವ ಕಾರ್ಮಿಕರು ಟೌನ್ಶಿಪ್ ಹೊರತುಪಡಿಸಿ ಬೇರೆ ಗ್ರಾಮದ ಕಾರ್ಮಿಕರು ಯಾರೂ ಹೊರ ಹೋಗಬಾರದು, ಒಳ ಬರಬಾರದೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದ್ರೆ ಜಿಲ್ಲಾಡಳಿತದ ಆದೇಶ ಮೀರಿ ಕಾರ್ಮಿಕರು ತೆರಳುತ್ತಿದ್ದಾರೆ.
