ಸಿಸಿಬಿಯಿಂದ ವಕೀಲ ಕಾಶೀಮ್ ಜಿ ಹತ್ಯೆ ತನಿಖೆ!
ಮಂಗಳೂರು: ನಗರದಲ್ಲಿ 16 ವರ್ಷಗಳ ಹಿಂದೆ ನಡೆದಿದ್ದ ವಕೀಲ ನೌಷಾದ್ ಕಾಶೀಮ್ ಜಿ ಹತ್ಯೆ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದ್ದು ಪೊಲೀಸ್ ತಂಡ ಮಂಗಳೂರಿನಲ್ಲಿ ತನಿಖೆ ಮುಂದುವರಿಸಿದೆ. ಇತ್ತೀಚೆಗೆ ಸೆನೆಗಲ್ ನಲ್ಲಿ ಬಂಧಿತನಾಗಿರುವ ರವಿ ಪೂಜಾರಿ ವಕೀಲ ನೌಶಾದ್ ಹತ್ಯೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದೆ.
2004ರ ಏ.9ರಂದು ತಾನು ವಾಸ್ತವ್ಯವಿದ್ದ ಪಳ್ನೀರ್‌ನ ಅಪಾರ್ಟ್‌ಮೆಂಟ್‌ನಲ್ಲಿ ನೌಷಾದ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮೊದಲು ಭೂಗತ ಪಾತಕಿ ರವಿ ಪೂಜಾರಿ ಕೊಲೆ ಬೆದರಿಕೆ ಹಾಕಿದ್ದ. ರವಿ ಪೂಜಾರಿ ಸದ್ಯ ಬೆಂಗಳೂರು ಪೊಲೀಸರ ವಶದಲ್ಲಿದ್ದು, ನೌಷಾದ್ ಹತ್ಯೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಚೆನ್ನಾಗಿ ಮೂಡಿ ಬರುತ್ತಿದೆ ಅಭಿನಂದನೆಗಳು