ಸವಣೂರು: ಗೇರುಬೀಜ ಸಾಗಾಟದ ಲಾರಿ ಪಲ್ಟಿ, ಮಾನವೀಯತೆ ಮೆರೆದ ಎಸ್ ಡಿಪಿಐ ಕಾರ್ಯಕರ್ತರು!

ಉಪ್ಪಿನಂಗಡಿ: ಠಾಣಾ ವ್ಯಾಪ್ತಿಯ ಸವಣೂರು ಪರಣೆ ಎಂಬಲ್ಲಿ ಗೇರುಬೀಜ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಕಮರಿಗೆ ಉರುಳಿದ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ-ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಲಾರಿಯಲ್ಲಿದ್ದ ಗೇರುಬೀಜ ಚೆಲ್ಲಾಪಿಲ್ಲಿಯಾಗಿದ್ದು ಸ್ಥಳಕ್ಕೆ ಧಾವಿಸಿದ ಸವಣೂರಿನ ಎಸ್ ಡಿಪಿಐ ಕಾರ್ಯಕರ್ತರು ಗೇರುಬೀಜವನ್ನು ಮತ್ತೊಂದು ವಾಹನಕ್ಕೆ ತುಂಬಿಸಿ ಮಾನವೀಯತೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *