ಸರಳವಾಗಿ ನೆರವೇರಿದ ಕೇರಳ ಸಿಎಂ ಪುತ್ರಿ-ಡಿವೈಎಫ್ ಐ ರಾಷ್ಟ್ರಾಧ್ಯಕ್ಷರ ಮದುವೆ!

ತಿರುವನಂತಪುರಂ: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಹಾಗೂ ಡಿವೈಎಫ್‍ಐ ರಾಷ್ಟ್ರಾಧ್ಯಕ್ಷ ಪಿ.ಎ. ಮುಹಮ್ಮದ್ ರಿಯಾಝ್ ಅವರ ವಿವಾಹ ಇಂದು ಪಿಣರಾಯಿ ಅವರ ಅಧಿಕೃತ ನಿವಾಸದಲ್ಲಿ ಸರಳವಾಗಿ ನೆರವೇರಿದೆ. ಇಬ್ಬರಿಗೂ ಎರಡನೇ ಮದುವೆಯಾಗಿದೆ.
ರಿಯಾಝ್ ಗೆ 2002ರಲ್ಲಿ ಮೊದಲ ಮದುವೆಯಾಗಿತ್ತು. ಮೂರು ವರ್ಷಗಳ ಬಳಿಕ ಮೊದಲ ಪತ್ನಿಗೆ ಡೈವೋರ್ಸ್ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ವೀಣಾ ಮೂರು ವರ್ಷದ ಹಿಂದೆ ತಮ್ಮ ಮೊದಲ ಪತಿಯಿಂದ ಡೈವೋರ್ಸ್ ಪಡೆದಿದ್ದು ಒಂದು ಮಗುವಿದೆ. ವೀಣಾ ಬೆಂಗಳೂರಿನ ಐಟಿ ಉದ್ಯಮಿಯಾಗಿದ್ದಾರೆ. 40ರಷ್ಟು ಮಂದಿ ಎರಡೂ ಕುಟುಂಬಗಳ ಆಪ್ತರು ಸರಳ ವಿವಾಹ ಸಮಾರಂಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *