`ಸರಕಾರ ಏನು ಬೇಕಾದ್ರೂ ಮಾಡ್ಲಿ’ -ಡಿಕೆಶಿ ಗರಂ

ಬೆಂಗಳೂರು: ನಗರದಲ್ಲಿ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಜನರ ರಕ್ಷಣೆ ಮಾಡಬೇಕಾದ ಸರಕಾರ ಕ್ರಮ ಜರುಗಿಸುತ್ತಿಲ್ಲ. ನಾವು ಜನರ ಪ್ರಾಣರಕ್ಷಣೆ ಮಾಡಲು ಮುಂದಾದರೆ ಅವನ್ಯಾರೋ ಡಿಸಿಎಂ ಬಾಯಿಗೆ ಬಂದಂತೆ ಮಾತಾಡ್ತಾನೆ. ಎಲ್ಲವನ್ನೂ ಸರಕಾರವೇ ನೋಡಿಕೊಳ್ಳಲಿ, ಏನು ಬೇಕಾದ್ರೂ ಮಾಡ್ಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಡಿಸಿಎಂ ಅಶ್ವಥ ನಾರಾಯಣ ಮತ್ತು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಡಿಕೆಶಿ
ಎಲ್ಲಾ ಮುಗಿದು ಸೋಂಕು ಹೆಚ್ಚಾಗುತ್ತಿದ್ದಂತ ಸರಕಾರ ಶಾಸಕರನ್ನು ಕರೆಸಿ ಸಭೆ ನಡೆಸಿದೆ’ ಎಂದು ಲೇವಡಿ ಮಾಡಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ, ವೈದ್ಯಾಧಿಕಾರಿ ಹಾಗೂ ಸಂಸದರ ಜೊತೆ ಚರ್ಚೆ ನಡೆಸಿ ನಾವು ಕೆಲವು ತೀರ್ಮಾಣಗಳನ್ನು ಕೈಗೊಂಡಿದ್ದೆವು. ಆದರೆ ಡಿಸಿಎಂ ಸರಿಯಾದ ಮಾಹಿತಿ ಇಲ್ಲದೆ ತಮಗೆ ತೋಚಿದಂತೆ ಮಾತನಾಡುತ್ತಾರೆ ಎಂದು ಡಿಕೆಶಿ ಕಿಡಿದಕಾರಿದ್ದಾರೆ.