ಸಂಬಳ ಕಡಿತದ ವಿರುದ್ಧ ಸುರಿವ ಮಳೆಯಲ್ಲೂ ಪ್ರತಿಭಟಿಸಿದ ಹೋಂ ಗಾರ್ಡ್ ಸಿಬ್ಬಂದಿ!!

ಮಂಗಳೂರು: ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ನೂರಕ್ಕೂ ಹೆಚ್ಚು ಗೃಹರಕ್ಷಕರು ನಗರದ ಮೇರಿ ಹಿಲ್ ಬಳಿ ಇರುವ ಹೋಮ್ ಗಾರ್ಡ್ ಕಚೇರಿ, ಎದುರು ಜಮಾಯಿಸಿ ಲಾಕ್‌ಡೌನ್ ಕಾರಣ ರಾಜ್ಯ ಸರ್ಕಾರ ಗೃಹರಕ್ಷಕರ ಸಂಖ್ಯೆಯನ್ನು ಕಡಿತಗೊಳಿಸುವ ಆದೇಶ ಹಾಗೂ ಸಂಬಳ ಕಡಿತದ ಭೀತಿ ವಿರುದ್ಧ ಪ್ರತಿಭಟನೆ ನಡೆಸಿದರು. ಮಳೆ ಸುರಿಯುತ್ತಿದ್ದರು ಲೆಕ್ಕಿಸದ ಸಿಬ್ಬಂದಿ ರಾಜ್ಯ ಸರಕಾರ ತಕ್ಷಣವೆ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *