ಶಿಕ್ಷಣ ತಜ್ಞರೇ ಪರೀಕ್ಷೆ ಬೇಡವೆಂದರೂ ಜಿದ್ದಿಗೆ ಬಿದ್ದ ಸರಕಾರ, ನಾಳೆ ನಡೆಯಲಿದೆ ಎಸ್ಸೆಸ್ಸೆಲ್ಸಿ ಪರೀಕ್ಷೆ!

ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಸದ್ಯ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಯೋಗ್ಯ ವಾತಾವರಣವಿಲ್ಲ ಎಂದು ಶಿಕ್ಷಣ ತಜ್ಞರೇ ತಿಳಿಸಿದ್ದರೂ ರಾಜ್ಯ ಸರಕಾರ ಮಾತ್ರ ಜಿದ್ದಿಗೆ ಬಿದ್ದು ನಾಳೆ ಪರೀಕ್ಷೆ ನಡೆಸಲು ಮುಂದಾಗಿದೆ. ಇಂದಿನ ಭಯಾನಕ ಸ್ಥಿತಿಯಲ್ಲಿ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ' ಎಂದು ಹಲವಾರು ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಸಂಘಟನೆಗಳು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ,ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ರದ್ದು ಮಾಡುವುದೇ ಸೂಕ್ತ’ ಎಂದು ಸಲಹೆ ನೀಡಿದ್ದಾರೆ. ಆದರೂ ಸರಕಾರ ಪರೀಕ್ಷೆಗೆ ಮುಂದಾಗಿರುವುದು ಮಕ್ಕಳ ಹೆತ್ತವರು, ಪೋಷಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
10ನೇ ತರಗತಿಯ ಪ್ರಮಾಣ ಪತ್ರ ಒಂದು ಮಹತ್ವದ ದಾಖಲೆಯಾಗಿದೆ. ಹೀಗಾಗಿ ಮಕ್ಕಳನ್ನು ಪರೀಕ್ಷೆ ಸೆಂಟರ್ ಗೆ ಕಳುಹಿಸಬೇಕೇ ಬೇಡವೇ ಎಂದು ಅಡಕತ್ತರಿಯಲ್ಲಿ ಮಕ್ಕಳ ಪೋಷಕರು ಇದ್ದಾರೆ. ಕೊರೊನಾ ಮಹಾಮಾರಿ ಅತ್ಯಂತ ವೇಗವಾಗಿ ಎಲ್ಲೆಡೆ ಹರಡುತ್ತಿದ್ದು ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಮಕ್ಕಳ ಭವಿಷ್ಯವನ್ನು ಅಪಾಯಕ್ಕೆ ನೂಕುವ ಕೆಟ್ಟ ನಿರ್ಧಾರಕ್ಕೆ ಸರಕಾರ ಮುಂದಾಗಿರುವುದು ಸರಿಯಲ್ಲ ಎಂಬ ಮಾತು ಸಾರ್ವತ್ರಿಕವಾಗಿ ಕೇಳಿಬರುತ್ತಿದೆ. ಪರೀಕ್ಷೆ ನಡೆಸದೆಯೂ ಎಲ್ಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪ್ರಮಾಣ ಪತ್ರ ದೊರೆತರೆ ಮಕ್ಕಳು, ಪೋಷಕರು ನೆಮ್ಮದಿಯಿಂದ ಇರಬಹುದು. ಆದರೆ ಸರಕಾರ ಮಾತ್ರ ಯಾರ ಮಾತನ್ನೂ ಕೇಳದೆ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಹೇಳುತ್ತಿದೆ. ಈ ಸಮಯದಲ್ಲಿ ನಿಜವಾಗಿಯೂ ಪರೀಕ್ಷೆಯನ್ನು ನಡೆಸುವುದು ಅನಿವಾರ್ಯವೇ? ಅತಿಮುಖ್ಯವೇ? ಸಮಂಜಸವೇ? ಈ ಪರೀಕ್ಷೆ ವಿದ್ಯಾರ್ಥಿಗಳ ಜೀವಕ್ಕಿಂತ ದೊಡ್ಡದೇ? ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ.

2 thoughts on “ಶಿಕ್ಷಣ ತಜ್ಞರೇ ಪರೀಕ್ಷೆ ಬೇಡವೆಂದರೂ ಜಿದ್ದಿಗೆ ಬಿದ್ದ ಸರಕಾರ, ನಾಳೆ ನಡೆಯಲಿದೆ ಎಸ್ಸೆಸ್ಸೆಲ್ಸಿ ಪರೀಕ್ಷೆ!

  1. Newspaper and Electronic media should tone down their fear mongering and educate people to be more responsible. I am a old man none of my children or grandchildren are appearing for SSLC exam, but as an educated person I feel children should be allowed to take exam without fear specially created by media. Yes environment is not friendly but keeping children is tenterhooks of suspense for months together is worse. Let each parent understand their responsibility of looking after the safety of their wards to ensure that the exams are conducted in an orderly and safe manner. Government is doing its best, let us and parents join hands to make it more safer and help to conduct the exams in safe environment

  2. Respect sir,
    We are going to face a huge milestone tomorrow and that is our sslc examination. Our honarable education minister Suresh kumar to a oath to do sslc exams and he dosnt care about the students life.i request Suresh kumar and all our Karnataka government to take a quick decision of postponding it it’s the matter of our life not Suresh Kumar’s. If you postponed the exams we all will admire you the most and we all will be in your need .if not it’s left to you

Leave a Reply

Your email address will not be published. Required fields are marked *