ವ್ಯಾಪಾರಿಗಳಿಗೆ ನೆಹರೂ ಮೈದಾನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ: ಹೈಕೋರ್ಟ್ ತಡೆ

ಮಂಗಳೂರು: ಕೇಂದ್ರ ಮಾರುಕಟ್ಟೆಯ ವ್ಯಾಪಾರಿಗಳಿಗೆ ಪರ್ಯಾಯವಾಗಿ ತಾತ್ಕಾಲಿಕ ನೆಲೆಯಲ್ಲಿ ನೆಹರೂ ಮೈದಾನ ಮತ್ತು ಉದ್ಯಾನದಲ್ಲಿ ಶೆಡ್‍ಗಳ ನಿರ್ಮಾಣಕ್ಕೆ ರಾಜ್ಯ ಹೈಕೋರ್ಟ್ ನಿನ್ನೆ ತಡೆಯಾಜ್ಞೆ ನೀಡಿದೆ. ಈ ವಿಚಾರಣೆ ಇಂದು ಹೈಕೋರ್ಟ್ ಮುಂದೆ ಬಂದಿದೆ. ಕಾಯಿದೆಯ ಸೆಕ್ಷನ್ 4ರ ಅಡಿ ಇಂದಿನಿಂದ 2 ತಿಂಗಳೊಳಗೆ ನೆಹರು ಮೈದಾನವನ್ನು ಉದ್ಯಾನ ಮತ್ತು ಆಟದ ಮೈದಾನವಾಗಿ ಘೋಷಿಸಲು ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಈ ಅವಧಿಯಲ್ಲಿ ನೆಹರೂ ಮೈದಾನದಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ತಡೆಹಿಡಿಯಲಾಗಿದೆ.
ಶೆಡ್‍ಗಳನ್ನು ಹಾಕಲು ಅಥವಾ ತಾತ್ಕಾಲಿಕ ಮಾರುಕಟ್ಟೆಯ ನಿರ್ಮಾಣದೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಎಂದು ತಿಳಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಆಗಸ್ಟ್ 19ಕ್ಕೆ ನಿಗದಿಪಡಿಸಿದೆ. ಈ ಪ್ರಕರಣದಲ್ಲಿ ಫಿರ್ಯಾದುದಾರರ ಪರವಾಗಿ ನ್ಯಾಯವಾದಿ ಕೆ.ವಿ.ನರಸಿಂಹನ್ ವಾದಿಸಿದ್ದರು.

Leave a Reply

Your email address will not be published. Required fields are marked *