ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತ್ಯು, ಶವವನ್ನು ಎದೆಗವಚಿಕೊಂಡು ಹೆತ್ತವರ ರೋಧನ!

ಲಖ್ನೋ: ಉತ್ತರ ಪ್ರದೇಶದ ಕನೌಜ್ ಪಟ್ಟಣದ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗುವೊಂದು ಸಾವನ್ನಪ್ಪಿದ್ದು ಅದನ್ನು ಎದೆಗವಚಿಕೊಂಡು ಹಿಡಿದು ಬಡ ಹೆತ್ತವರು ಗೋಳಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಗು ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದ್ದು ಆಸ್ಪತ್ರೆ ಇದನ್ನು ನಿರಾಕರಿಸಿದೆ. ಜ್ವರ ಹಾಗೂ ಕುತ್ತಿಗೆಯ ಉರಿಯೂತ ಸಮಸ್ಯೆಯಿದ್ದ ಮಗುವನ್ನು ಮುಟ್ಟಲು ವೈದ್ಯರು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ. ಪ್ರೇಮ್ ಚಂದ್ ಹಾಗೂ ಆಶಾದೇವಿ ದಂಪತಿಯ ಮಗು ಸಾವನ್ನಪ್ಪಿದ್ದು ಸಾರ್ವಜನಿಕರು ದೃಶ್ಯಗಳನ್ನು ಮೊಲೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಆಸ್ಪತ್ರೆ ನಿರ್ಲಕ್ಷ್ಯವನ್ನು ಟೀಕಿಸುತ್ತಿದ್ದಾರೆ.

2 thoughts on “ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತ್ಯು, ಶವವನ್ನು ಎದೆಗವಚಿಕೊಂಡು ಹೆತ್ತವರ ರೋಧನ!

  1. ಕೊರೋನಾ ಎಂಬ ಮಹಾ ಮಾರಿಯಿಂದ ಬಳಲುತ್ತಿರುವವರನ್ನು ಕೆಲವು ವೈದ್ಯರು ಮನೆ ಮಠ ತಮ್ಮ ಕಂದಮ್ಮಗಳನ್ನು ದೂರಮಾಡಿ ಕೊಂಡು ಜನರ ಪ್ರಾಣ ಉಳಿಸಲು ಹಗಲಿರುಳು ಸೇವೆ ಮಾಡುತ್ತಿರುವಾಗ ಕೊರೋನಾ ದ ಬಗ್ಗೆ ಎಲ್ಲಾ ತಿಳಿದಿರುವ ಕೆಲವು ವೈದ್ಯರು ಸಿಬ್ಬಂದಿಗಳು ಈ ರೀತಿ ಜನರ ಪ್ರಾಣ ತೆಗೆದರೆ ಇನ್ನೂ ಬೇರೆಯವರ ಗತಿ ಏನು. ಇನ್ನು ಸ್ವಲ್ಪ ಜ್ವರ ಶೀತ ಬಂದು ಕೆಲವು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದರೆ ಅವರು ಜನರನ್ನು ನೋಡುವ / ಅವರ ಬಳಿ ವರ್ತಿಸುವ ರೀತಿಯೇ ಬೇರೆ ಅವರನ್ನು ಒಂದು ಮೈಲು ದೂರ ನಿಲ್ಲಿಸುತ್ತಾರೆ ಮದ್ದು ದೂರದಿಂದ ಕೊಡುತ್ತಾರೆ ಹಣ ಮಾತ್ರ ಕೈಯಲ್ಲಿ ಸರಿಯಾಗಿ ತೆಗೆದುಕೊಳ್ಳುತ್ತಾರೆ ಇದು ಯಾವ ನ್ಯಾಯ ಸ್ವಾಮಿ

Leave a Reply

Your email address will not be published. Required fields are marked *