`ವಿರಾಟ್ ಸರಿಸಮಾನ ಬ್ಯಾಟ್ಸ್‍ಮೆನ್ ನಾನಲ್ಲ’

ಇಸ್ಲಾಮಾಬಾದ್: ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾನು ಇನ್ನೂ ಬೆಳೆಯಬೇಕಿದೆ ಹಾಗೂ ಸಾಧಿಸುವುದು ಸಾಕಷ್ಟಿದೆ. ಅವರಂಥ ಆಟಗಾರನಾಗಲು ಪ್ರಯತ್ನಿಸುತ್ತೇನೆ. ಪಾಕಿಸ್ತಾನ ತಂಡವು ನನ್ನ ನಾಯಕತ್ವದಲ್ಲಿ ಹೆಚ್ಚು ಪಂದ್ಯಗಳನ್ನು ಗೆಲ್ಲುವಂತೆ ಶ್ರಮಿಸುತ್ತೇನೆ. ವಿರಾಟ್ ಸಮಬಲ ಬ್ಯಾಟ್ಸ್‍ಮನ್ ನಾನಲ್ಲ” ಎಂದು ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಮ್ ತಿಳಿಸಿದ್ದಾರೆ. ಇದೇ ವೇಳೆ ನ್ ಬಾಬರ್ ಅಜಮ್ ಇಂಡೋ-ಪಾಕ್ ಮಿಶ್ರ ತಂಡವನ್ನು ರಚಿಸಿದ್ದು, ಅದರಲ್ಲಿ ಟೀಂ ಇಂಡಿಯಾ ಆಟಗಾರರೇ ಹೆಚ್ಚಾಗಿದ್ದಾರೆ.
ಇಂಡೋ-ಪಾಕ್ ಮುಖಾಮುಖಿಯಾಗುವುದು ಹೆಚ್ಚು ವಿರಳವಾಗಿದೆ. ಐಸಿಸಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಆಡುತ್ತವೆ. ಆದರೆ ಆಟಗಾರರು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಾಗೇ ಪಾಕಿಸ್ತಾನದ ಟಿ20, ಏಕದಿನ ಕ್ರಿಕೆಟ್ ತಂಡ ನಾಯಕ ಬಾಬರ್ ಅಜಮ್, ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನಿರೂಪಕ, ವಿಶ್ಲೇಷಕ ಹರ್ಷ ಭೋಗ್ಲೆ ಅವರೊಂದಿಗಿನ ಲೈವ್ ಚಾಟಿಂಗ್‍ನಲ್ಲಿ ಈ ವಿಚಾರವನ್ನು ಬಾಬರ್ ಅಜಮ್ ಹಂಚಿಕೊಂಡಿದ್ದಾರೆ. ಬಾಬರ್ ತಾವು ರಚಿಸಿದ ಟಿ20 ತಂಡದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನಂತರದ 3ನೇ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಮೈದಾನಕ್ಕೆ ಇಳಿಯಲಿದ್ದಾರೆ. ಬಾಬರ್ ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‍ಮನ್ ಆಗಿದ್ದಾರೆ. ಶೋಯೆಬ್ ಮಲಿಕ್ ಆಲ್‍ರೌಂಡರ್ ಆಗಿದ್ದರೂ ಬಾಬರ್ ಅವರು ತಮ್ಮ ತಂಡದಲ್ಲಿ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೂ ಸ್ಥಾನ ನೀಡಿದ್ದಾರೆ. ತಂಡದಲ್ಲಿ ಧೋನಿ, ಮಲಿಕ್ ಮತ್ತು ಪಾಂಡ್ಯ ಅವರೊಂದಿಗೆ, ಬಾಬರ್ ತಂಡವು ವಿಶ್ವ ದರ್ಜೆಯ ಶ್ರೇಷ್ಠ ಬ್ಯಾಟಿಂಗ್ ತಂಡವನ್ನು ಹೊಂದಿದೆ. ತಂಡದಲ್ಲಿ ಶಾದಾಬ್ ಖಾನ್ ಮತ್ತು ಕುಲದೀಪ್ ಯಾದವ್ ಇಬ್ಬರು ಸ್ಪಿನ್ನರ್ ಆಗಿದ್ದರೆ, ಜಸ್‍ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಅಮೀರ್ ಅವರು ವೇಗ ಬೌಲರ್ ಗಳಾಗಿದ್ದಾರೆ. ಒಟ್ಟಾರೆಯಾಗಿ ಬಾಬರ್ ಅಜಮ್ ಅವರು ಆಟದ ಎಲ್ಲಾ ವಿಭಾಗಗಳಲ್ಲಿ ವಿವಿಧ ಆಯ್ಕೆಗಳೊಂದಿಗೆ ಬಲಿಷ್ಟ ತಂಡವನ್ನು ಕಟ್ಟಿದ್ದಾರೆ.
ಬಾಬರ್ ಅಜಮ್ ತಂಡ: ರೋಹಿತ್ ಶರ್ಮಾ, ಬಾಬರ್ ಅಜಮ್, ವಿರಾಟ್ ಕೊಹ್ಲಿ, ಶೋಯೆಬ್ ಮಲಿಕ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ಜಸ್‍ಪ್ರೀತ್ ಬುಮ್ರಾ, ಮೊಹಮ್ಮದ್ ಅಮೀರ್, ಕುಲದೀಪ್ ಯಾದವ್.

Leave a Reply

Your email address will not be published. Required fields are marked *