ವಿರಳ ಚರ್ಮರೋಗದಿಂದ ಬಳಲುತ್ತಿರುವ ಮಹಿಳೆಯ ಚಿಕಿತ್ಸೆಗೆ ಬೇಕಿದೆ ಸಹಾಯಹಸ್ತ

ಮಂಗಳೂರು: ಕಾರ್ಕಳದ ಮಾಳ ಗ್ರಾಮದ ಕೂಡಬೆಟ್ಟು ಎಂಬಲ್ಲಿ ವಾಸಿಸುವ ರಾಜೀವಿ ಎಂಬವರು ಪೇಂಫಿಗಸ್ ವಲ್ಗ್ಯಾರಿಸ್ ಎಂಬ ವಿರಳ ಚರ್ಮರೋಗದಿಂದ ಬಳಲುತ್ತಿದ್ದು ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಹಣ ವ್ಯಯಿಸಿದ್ದು ಇನ್ನೂ ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಸುಮಾರು 3 ಲಕ್ಷ ರೂಪಾಯಿಗಳ ಅವಶ್ಯಕತೆಯಿದ್ದು ದಾನಿಗಳ ನೆರವನ್ನು ಬೇಡಿದ್ದಾರೆ.
ಕಡುಬಡತನದ ರಾಜೀವಿ ಮತ್ತು ಅವರ ಪತಿ ತೆಂಗಿನಕಾಯಿ ಮತ್ತು ಅಡಿಕೆ ಸಿಪ್ಪೆ ಸುಲಿಯುವ ಮೂಲಕ ಜೀವನ ಸಾಗಿಸುತ್ತಿದ್ದು ಅವರಿಗೆ 13 ಮತ್ತು 12 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಎಲ್ಲರಂತೆ ಸಾಮಾನ್ಯ ಮತ್ತು ಆರೋಗ್ಯಕರ ಚರ್ಮ ಇದ್ದು ಲೋಳೆಯ ಪೊರೆಗಳಲ್ಲಿನ ಪ್ರೋಟೀನ್‍ಗಳ ವಿರುದ್ಧ ರೋಗನಿರೋಧಕ ವ್ಯವಸ್ಥೆಯು ತಪ್ಪಾಗಿ ಪ್ರತಿಕಾಯಗಳನ್ನು ಮಾಡಿದಾಗ ಪೆಮ್ಫಿಗಸ್ ವಲ್ಗ್ಯಾರಿಸ್ ಸಂಭವಿಸುತ್ತದೆ. ಇದು ಚರ್ಮದ ಮೇಲೆ ಗುಳ್ಳೆಗಳು ಮತ್ತು ಗಾಯಗಳಿಗೆ ಕಾರಣವಾಗುತ್ತದೆ. ಇದರ ನಿಖರವಾದ ಕಾರಣ ವೈದ್ಯಕೀಯ ಲೋಕಕ್ಕೆ ತಿಳಿದುಬಂದಿಲ್ಲ. ಇಂಡಿಯಾನಾ ವೈದ್ಯರ ಪ್ರಕಾರ ಅವರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದೀರ್ಘಕಾಲ ಉಳಿಯಬೇಕಾಗುತ್ತದೆ ಮತ್ತು ಅಂದಾಜು 3 ಲಕ್ಷ ರೂ ವೆಚ್ಚವಾಗಬಹುದು. ಬಡಕುಟುಂಬಕ್ಕೆ ಸಮಾಜಪರ ಕಾಳಜಿಯ ಸಂಘ ಸಂಸ್ಥೆಗಳು, ದಾನಿಗಳು ನೆರವು ನೀಡಿದಲ್ಲಿ ರಾಜೀವಿ ಅವರು ಚಿಕಿತ್ಸೆ ಪಡೆದು ಮತ್ತೆ ಹಿಂದಿನಂತಾಗಬಹುದು. ದಾನಿಗಳು ಸಹಾಯಹಸ್ತ ಚಾಚಲು ಅವರ ಬ್ಯಾಂಕ್ ಅಕೌಂಟ್ ಅನ್ನು ಸಂಪರ್ಕಿಸಬಹುದು.
ಹೆಸರು: ರಾಜೀವಿ
ಅಕೌಂಟ್ ಸಂಖ್ಯೆ: 01632610012869

IFSC-SYNB0000163

Branch- Bajagoli (Syndicate  Bank)

Contact- ಜಗದೀಶ್ ಕೂಡಬೆಟ್ಟು- 9880559937

Leave a Reply

Your email address will not be published. Required fields are marked *