ವಿಭಜಕದ ಮೇಲೇರಿದ ಗ್ಯಾಸ್ ಸಿಲಿಂಡರ್ ಲಾರಿ

ಕಾಪು: ಚಾಲಕ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯೊಂದು ಡಿವೈಡರ್ ಮೇಲೇರಿದ ಘಟನೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದ್ದು, ಆದರೆ ಅದೃಷ್ಟವ ಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಬುಧವಾರ ತಡರಾತ್ರಿ ಶಿವಮೊಗ್ಗ ದಿಂದ ಖಾಲಿ ಗ್ಯಾಸ್ ಸಿಲಿಂಡರ್ ಹೊತ್ತು ಮಂಗಳೂರಿನತ್ತ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು, ಪಡುಬಿದ್ರಿ ಪ್ರಗತಿ ಕಾಂಪ್ಲೆಕ್ಸ್ ಸಮೀಪದ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗೆ ಮಧ್ಯೆ ಹಾಕಲಾದ ಡಿವೈಡರ್ ಮೇಲೇರಿ ನಿಂತಿಂದೆ.
ಘಟನೆಯಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ವಿಭಜಕದಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಚಾಲಕ ಶ್ರೀಧರ್ ದೂರಿ ದ್ದಾರೆ.