ವನಮಹೋತ್ಸವ ಕಾರ್ಯಕ್ರಮಕ್ಕೆ ಮಾಧುಸ್ವಾಮಿ ಚಾಲನೆ
ಗುಬ್ಬಿ: ಮರಳುಗಾಡು ಪ್ರದೇಶವಾಗಿ ರಾಜ್ಯದಲ್ಲಿ 41 ತಾಲೂಕುಗಳು ಪರಿವರ್ತನೆಯಾಗುತ್ತಾ ಇದ್ದು ಅದರಲ್ಲಿ ತುಮಕೂರು ಜಿಲ್ಲೆಯ 06 ತಾಲೂಕುಗಳಿವೆ ಈಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಟಲ್ ಭೂಜಲ್ ಯೋಜನೆ'ಯ ಮೂಲಕ ಅಂತರ್ಜಲ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಕರ್ನಾಟಕಕ್ಕೆ 1230 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಹಾಗೂ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ತಿಳಿಸಿದರು. ತಾಲೂಕಿನ ನಿಟ್ಟೂರು ಹೋಬಳಿ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಅವರು ಸಸಿಗೆ ನೀರನ್ನು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ರೈತರಿಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆಗೆ ಬೆಂಬಲ ಬೆಲೆ ಇಲ್ಲದ ಕಾರಣ ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೇ ನಡೆಸಿ ಆರು ಸಾವಿರದಿಂದ ಹತ್ತು ಸಾವಿರದ ಮುನ್ನೂರು ರೂಪಾಯಿ ಬೆಂಬಲ ಬೆಲೆಯನ್ನು ಸರ್ಕಾರವು ನಿಗದಿ ಮಾಡಿದ್ದು, ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸುವಂತೆ ಸೂಚನೆಯನ್ನು ಈಗಾಗಲೇ ನೀಡಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರವು
ಅಟಲ್ ಭೂಜಲ್ ಯೋಜನೆ’ಯ ಮೂಲಕ ಅಂತರ್ಜಲ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಕರ್ನಾಟಕಕ್ಕೆ 1230 ಕೋಟಿ ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದು, ತುಮಕೂರು ಜಿಲ್ಲೆಯ 06 ತಾಲೂಕುಗಳಿವೆ. ರಾಜ್ಯದಲ್ಲಿ 41 ತಾಲೂಕುಗಳು ಮರಳುಗಾಡು ಪ್ರದೇಶವಾಗಿ ಪರಿವರ್ತನೆಯಾಗುತ್ತಾ ಇದ್ದು, ಈಗಲಾದರೂ ರೈತರು ಪ್ರಕೃತಿಗೆ ವಿರುದ್ದವಾದ ಯಾವುದೆ ಸಸಿಗಳನ್ನು ಹಾಕದೆ ಅದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವಲಂಬಿತ ಸಸಿಗಳನ್ನು ಹಾಕಿ ಪೋಷಿಸುವ ಮೂಲಕ ಕೇಂದ್ರ ಸರ್ಕಾರವು ನೀಡಿರುವ ಮಾಹಿತಿ ಹುಸಿ ಮಾಡುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಿಟ್ಟೂರು ಹೋಬಳಿ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶವನ್ನು ವೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಯಶೋದಮ್ಮ, ಜಿಲ್ಲಾ ಅರಣ್ಯ ವ¯ಯಾಧಿಕಾರಿ ಗಿರೀಶ್ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ನಾಗರಾಜ್, ಎಸಿಎಫ್ ಸಂತೋಷ್ ನಾಯಕ್, ಗುಬ್ಬಿ ವಲಯ ಅರಣ್ಯಾಧಿಕಾರಿ ರವಿ, ಚಂದ್ರಪ್ಪ, ರಮೇಶ್, ಉಮಾದೇವಿ ಇದ್ದರು.