ಲ್ಯಾಂಡ್ ಟ್ರೇಡ್ಸ್ ನಿಂದ `ಯೋಗ ದಿನ’ ಆಚರಣೆ

ಮಂಗಳೂರು: ನಗರದ ಪ್ರತಿಷ್ಠಿತ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯು ಜೂ.21ರಂದು ತನ್ನ ಎರಡು ಮಹತ್ವಪೂರ್ಣ ಯೋಜನೆಗಳಾದ ಸಾಲಿಟೇರ್ ಮತ್ತು ಸಾಯಿಗ್ರಾಂಡ್ಯೂರ್‍ಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು. ಯೋಗವನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸುವ ಪ್ರಧಾನಿ ಮೋದಿ ಅವರ ಆಶಯ ಮತ್ತು ಕೋವಿಡ್ -19 ಸಹಿತ ಎಲ್ಲಾ ಆರೋಗ್ಯ ಸಮಸ್ಯೆಗಳ ವಿರುದ್ಧ ಯೋಗದ ಮೂಲಕ ಜನಜಾಗೃತಿಗೆ ಲ್ಯಾಂಡ್‍ಟ್ರೇಡ್ಸ್ ಈ ಕಾರ್ಯಕ್ರಮ ನಡೆಸಿತೆಂದು ಲ್ಯಾಂಡ್‍ ಟ್ರೇಡ್ಸ್ ಮಾಲಕ ಕೆ. ಶ್ರೀನಾಥ್ ಹೆಬ್ಬಾರ್ ಅವರು ವಿವರಿಸಿದ್ದಾರೆ.
ನಮ್ಮ ಗ್ರಾಹಕರ ಸಮಗ್ರ ಸುರಕ್ಷತೆಗೆ, ಆರೋಗ್ಯಪೂರ್ಣ ಪರಿಸರಕ್ಕೆ ನಾವು ಬದ್ಧರಾಗಿದ್ದೇವೆ. ಲಾಕ ಡೌನ್ ಪ್ರಕರಣದ ಅನಂತರ, ನಮ್ಮ ಎಲ್ಲಾ ವಸತಿ ಸಮುಚ್ಛಯಗಳಲ್ಲಿ ನಿವಾಸಿಗಳು ಅಪಾರ್ಟ್‍ಮೆಂಟ್ ಒಳಗೆ ಇರವಂತೆ ನಾವು ಪ್ರೋತ್ಸಾಹ ನೀಡಿದ್ದೇವೆ. ಈಗ ಯೋಗ ಪರಿಣತರ ಮೂಲಕ ಯೋಗ ದಿನವನ್ನು ಆಚರಿಸಿದ್ದೇವೆ. ಎಂದವರು ಹೇಳಿದರು. ಸಾಯಿ ಗ್ರಾಂಡ್ಯೂರ್‍ನಲ್ಲಿ ಯೋಗ ದಿನಾಚರಣೆಯನ್ನು ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಪ್ರೊ. ವೃಷಭರಾಜ ಜೈನ್ ಉದ್ಘಾಟಿಸಿದರು. ಹ್ಯಾಟ್‍ಹೀಲ್‍ನ ಸಾಲಿಟೇರ್‍ನಲ್ಲಿ ಲ್ಯಾಂಡ್‍ ಟ್ರೇಡ್ಸ್ ಡಿಜಿಎಂ ಕ್ಯಾನಿ ಮೆಂಡೊನ್ಸಾ ಸ್ವಾಗತಿಸಿದರು. ಡಾ. ಮಹಾಬಲ ಪುಂಚತ್ತೋಡಿ ಅವರು ಯೋಗ ಪ್ರಾತ್ಯಕ್ಷಿಕೆ ಹಾಗೂ ಶಿಬಿರಗಳನ್ನು ನಡೆಸಿಕೊಟ್ಟರು. ಯೋಗದಿಂದ ಆರೋಗ್ಯ ಎಂದವರು ಸಂಘಟಕರನ್ನು ಅಭಿನಂದಿಸಿದರು. ಎರಡೂ ಸಮುಚ್ಛಯಗಳಲ್ಲಿ ನಿವಾಸಿಗಳು ಪಾಲ್ಗೊಂಡರು. ಉಷ್ಣತಾ ತಪಾಸಣೆ, ಸಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಸಹಿತ ಎಲ್ಲಾ ಸೂಚಿತ ಕ್ರಮಗಳನ್ನು ಅನುಸರಿಸಲಾಗಿತ್ತು.

Leave a Reply

Your email address will not be published. Required fields are marked *