ಲಾಕ್ ಡೌನ್ ಸಂಕಷ್ಟ: ತೆಂಗು ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಿ- ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಆಗ್ರಹ
ಗುಬ್ಬಿ: ಲಾಕ್ ಡೌನ್ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರ 10,300 ರೂಗಳ ಜತೆಗೆ 1,500 ರೂಗಳ ಪ್ರೋತ್ಸಾಹಧನವನ್ನು ನೀಡಿ ರೈತರಿಗೆ ಚೈತನ್ಯ ತುಂಬಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಆಗ್ರಹಿಸಿದರು. ತಾಲ್ಲೂಕಿನ ಗಳಗ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ 50 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ನೀಡಿದ ಬೆಂಬಲ ಬೆಲೆ ಅಧಿಕೃತಗೊಳಿಸಬೇಕಾದ ರಾಜ್ಯ ಸರ್ಕಾರ ರೈತರಿಗೆ ತಮ್ಮ ಪ್ರೋತ್ಸಾಹವನ್ನು ಹೆಚ್ಚಿಸುವ ಕೆಲಸ ಮಾಡಬೇಕಿದೆ. ಅಧಿಕೃತವಾಗಿ ಘೋಷಣೆಗೆ ಮುನ್ನಾ ಜಿಲ್ಲಾ ಉಸ್ತುವಾರಿ ಸಚಿವರ ಘೋಷಣೆ ಸಾರ್ಥಕವಾಗಿ ಅನುಷ್ಠಾನಕ್ಕೆ ಮೊದಲು ಬರಲಿ ಎಂದರು. ಮಾಸ್ಕ್ ದಿನಾಚರಣೆ ಜಾಗೃತಿಗಾಗಿ ಮಾತ್ರ ಜನರ ಜವಾಬ್ದಾರಿ ಅರಿವು ಮೂಡಿದಲ್ಲಿ ಮಾತ್ರ ಸಾರ್ಥಕವಾದದು. ಸ್ವೇಚ್ಚಾಚಾರದಂತೆ ಏರುತ್ತಿರುವ ವೈರಸ್ ಬಗ್ಗೆ ಭಯವಂತೂ ಜನರಲ್ಲಿ ಕಾಣುತ್ತಿಲ್ಲ. ಈ ಮಧ್ಯೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಿದ್ದತೆ ನಡೆದಿದೆ. ಮಕ್ಕಳ ಶಿಕ್ಷಣಕ್ಕೆ ಪರೀಕ್ಷೆ ಒಂದು ಮಾನದಂಡ. ಪರೀಕ್ಷೆ ನಡೆಸಿಯೇ ಮಕ್ಕಳ ಭವಿಷ್ಯ ನಿರ್ಧರಿಸಬೇಕಿದೆ. ಈ ವೈರಸ್ ದಾಳಿ ಮಧ್ಯೆ ಬದುಕಲೇಬೇಕು ಎಂದ ಅವರು ಭೂಸ್ವಾಧೀನ ತಿದ್ದುಪಡಿ ಕಾಯಿದೆ ತಿದ್ದುಪಡಿ ಊರ್ಜಿತವಲ್ಲ. ಈಗಾಗಲೇ ರೈತರು ಬೆಳೆದ ಬೆಳೆಗೆ ಬೆಲೆ ಸಿಗದೆ ಬೀದಿಗೆ ಬಿದ್ದಿದ್ದಾರೆ. ಈ ಮಧ್ಯೆ ಉಳ್ಳವರಿಗೆ ಭೂಮಿ ನೀಡುವ ಕಾನೂನು ಸಣ್ಣ ರೈತರನ್ನು ಸಂಪೂರ್ಣ ನೆಲಕಚ್ಚಿಸಲಿದೆ. ಕಾಯಿದೆ ಮೊದಲು ಏನೋ ಎಂದು ತಿಳಿಯದಿದ್ದರೂ ದಿನ ಕಳೆದಂತೆ ಆಹಾರ ಕೊರತೆ ಜತೆಗೆ ರೈತಾಪಿ ವರ್ಗವೇ ನಾಪತ್ತೆಯಾಗುವ ಕಾಲ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಸ್ವಾಗತಾರ್ಹ. ಈ ಹಿಂದೆ ಕೂಡಾ ಇದೇ ನಿಯಮ ಪಾಲಿಸಲಾಗಿದೆ. ಆದರೆ ಬಿಜೆಪಿ ಸರ್ಕಾರ ನಾಮಿನಿ ಸದಸ್ಯರ ನೇಮಕದ ಹೊಸ ಪದ್ದತಿಗೆ ಮುಂದಾಗಿತ್ತು. ಸಂವಿಧಾನದ ಅರಿವು ತಡವಾಗಿ ಆಗಿರುವುದು ಸಮಾಧಾನ ತಂದಿದೆ ಎಂದ ಅವರು ಬಗರ್‍ಹುಕುಂ ಮೂಲಕ ಅರಣ್ಯ ಪ್ರದೇಶದ ಸ್ಥಳದ ಮಂಜೂರಿಗೆ ಸಾಕಷ್ಟು ರೈತರು ಕಾದಿದ್ದಾರೆ. ಈ ಹಿಂದೆ ಜಾರಿಗೆ ಬಂದ ಅರಣ್ಯ ಹಕ್ಕು ಕಾಯಿದೆ 50 ವರ್ಷಗಳಿಂದ ಅನುಭವದಲ್ಲಿದ್ದ ರೈತರು ಮಂಜೂರಿಗೆ ಕೇಳಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ 85 ಅರ್ಜಿ ಕಡತವಾಗಿದೆ. ಇಂದಿಗೂ ಮಂಜೂರು ಆಗದೇ ಸಾಕಷ್ಟು ಗೊಂದಲಕ್ಕಿ ಸಿಲುಕಿದೆ. ಅರಣ್ಯ ಪ್ರದೇಶ ವಾಸ್ತವದಲ್ಲಿದೆ. ಆದರೆ ದಾಖಲೆ ಕಂದಾಯ ಇಲಾಖೆಯಾಗಿದೆ. ಇದು ಕೂಡಾ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ನಿರ್ಧಾರದ ಮೇಲೆ ನಿಂತಿದೆ ಎಂದರು. ಇದೇ ಸಂದರ್ಭದಲ್ಲಿ ಮಾಸ್ಕ್ ದಿನಾಚರಣೆ ನಡೆಸಿ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾ ಪ್ರತಾಪ್, ಮಾಜಿ ಅಧ್ಯಕ್ಷ ಮಹಮದ್ ಅನ್ಸರ್, ಮಾಜಿ ಗ್ರಾಪಂ ಸದಸ್ಯ ದಿವಾಕರ್, ಕೊಪ್ಪ ವೆಂಕಟೇಶ್, ಗುತ್ತಿಗೆದಾರ ಉಮೇಶ್, ಇಂಜಿನಿಯರ್ ಚಿದಾನಂದ್ ಇತರರು ಇದ್ದರು.