ಗೋಮಾಂಸ ಸಾಗಾಟದ ಟೆಂಪೋ ತಡೆದು ಚಾಲಕನಿಗೆ ಹಲ್ಲೆ! ನಗರದ ಫಳ್ನೀರ್ ಬಳಿ ಘಟನೆ!!

ಮಂಗಳೂರು: ನಗರದ ಬಂದರ್ ಪ್ರದೇಶಕ್ಕೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಟೆಂಪೋ ಒಂದನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರ ತಂಡ ತಡೆದು ಅದರಲ್ಲಿದ್ದವರಿಗೆ ಹಲ್ಲೆಗೈದ ಘಟನೆ ಇಂದು ಮುಂಜಾನೆ ನಗರದ ಫಳ್ನೀರ್ ಬಳಿಯ ಹೈಲ್ಯಾಂಡ್ ಆಸ್ಪತ್ರೆ ಬಳಿ ನಡೆದಿದೆ.
ಟೆಂಪೋವನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಕೃತ್ಯವೆಸಗಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬರಬೇಕಿದೆ.

ಬಜರಂಗದಳ ಎಚ್ಚರಿಕೆ ನೀಡಿತ್ತು!
ಕಳೆದ ವಾರ ಕೊಟ್ಟಾರ ಬಳಿ ಗೋಸಾಗಾಟ ಮಾಡುತ್ತಿದ್ದ ಮಿನಿ ಟೆಂಪೋ ತಡೆದು ಬಜರಂಗದಳ ಕಾರ್ಯಕರ್ತರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಬಜರಂಗದಳ ನಾಯಕರು ಗೋಸಾಗಾಟ ತಡೆಯುವುದಾಗಿ ಎಚ್ಚರಿಕೆ ನೀಡಿದ್ದರು ಮಾತ್ರವಲ್ಲದೆ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು. ಇಂದು ಬೆಳಗ್ಗೆ ಮತ್ತೆ ಇಂತದ್ದೇ ಘಟನೆ ನಡೆದಿದ್ದು ಸುಮ್ಮನೆ ಕೂತಿದ್ದ ಯುವಕರಿಂದ ಮತ್ತೆ ಗೋಹತ್ಯಾ ವಿರೋಧಿ ಹೋರಾಟ ಆರಂಭವಾಗುವ ಸುಳಿವು ನೀಡಿದೆ.

Leave a Reply

Your email address will not be published. Required fields are marked *