ರೋಹಿತ್ ಶರ್ಮಾ ಕಾಲೆಳೆದ ಚಹಲ್

ನವದೆಹಲಿ: ಸದ್ಯ ಕೊರೊನಾ ಹಿನ್ನೆಲೆಯಲ್ಲಿ ವಿಶ್ವದಲ್ಲಿ ಕ್ರೀಡೆಗೆ ಬ್ರೇಕ್ ಬಿದ್ದಿರುವಾಗ ಆಟಗಾರರು ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್ ಮುಂದೆ ಹೆಜ್ಜೆ ಮುಂದಿದ್ದಾರೆ. ಸದ್ಯ ರೋಹಿತ್ ಶರ್ಮಾರನ್ನು ಟ್ರೋಲ್ ಮಾಡುವ ಮೂಲಕ ಚಹಲ್ ಸುದ್ದಿಯಲ್ಲಿದ್ದಾರೆ.
ಟೀಂ ಇಂಡಿಯಾ ಓಪನರ್ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಅವರೊಂದಿಗೆ ಚಹಲ್ ಉತ್ತಮ ಸ್ನೇಹ ಹೊಂದಿದ್ದಾರೆ. ಈ ಇಬ್ಬರೂ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರರ ಕಾಲು ಎಳೆಯುತ್ತಲೇ ಇರುತ್ತಾರೆ. ಯಜುವೇಂದ್ರ ಚಹಲ್ ಅವರು ರೋಹಿತ್ ಶರ್ಮಾರನ್ನು ಹುಡುಗಿಯಂತೆ ಚಿತ್ರಿಸಿ ಟ್ವಿಟ್ ಮಾಡಿದ್ದಾರೆ. ಜೊತೆಗೆ “ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದಿರಾ ರೋಹಿತ್ ಶರ್ಮಾ ಬಾಯ್” ಎಂದು ಬರೆದುಕೊಂಡು ತಮಾಷೆ ಮಾಡಿದ್ದಾರೆ. ಹಿಟ್‍ಮ್ಯಾನ್ ಈವರೆಗೂ ಚಹಲ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರು ಕೂಡ ಚಹಲ್ ಅವರ ಕಾಲು ಎಳೆಯುವ ಅವಕಾಶವನ್ನು ಬಿಡುವುದಿಲ್ಲ. ಹೀಗಾಗಿ ಇಬ್ಬರ ತಮಾಷೆಯನ್ನು ಮುಂದುವರಿಯಲಿದೆ ಎಂದು ನೆಟ್ಟಿಗರು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *