`ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಅನಿವಾರ್ಯ’ -ಮಸಾಲಾ ಜಯರಾಂ

ಮಂಗಳೂರು:
ಕೋರಾನ ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಅವಶ್ಯಕತೆ ಇದೆ. ಪರಿಸ್ಥಿತಿ ಹದ್ದುಮೀರುವ ಮುನ್ನಾ ಈ ಕ್ರಮ ಅವಶ್ಯ ಹಾಗೂ ಅನಿವಾರ್ಯವಾಗಿದೆ’ ಎಂದು ತುರುವೇಕೆರೆ ಶಾಸಕ ಮಸಲಾ ಜಯರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಸಿ.ಎಸ್.ಪುರದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಅಂಗಡಿ ಮಳಿಗೆ ಹಾಗೂ ಸಾರ್ವಜನಿಕ ಶೌಚಾಲಯ ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ಅಂತರ ಕಾದು ಎಲ್ಲಾ ಜಾಗೃತಿವಹಿಸಿದ್ದರೂ ಕೋವಿಡ್-19 ವೈರಸ್ ಹರಡುತ್ತಿದೆ. ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹಿನ್ನಲೆ ಲಾಕ್ಡೌನ್ ಒಂದೇ ಸದ್ಯದ ಔಷಧಿಯಾಗಿದೆ ಎಂದರು.
ಮುಂದಿನ ವಾರದಲ್ಲಿ ಹೇಮಾವತಿ ತುಮಕೂರು ಜಿಲ್ಲೆಗೆ ಹರಿಯಲಿರುವ ಬಗ್ಗೆ ಜಿಲ್ಲಾ ಉಸ್ತುವಾರ ಸಚಿವರು ಸುಳಿವು ನೀಡಿದ್ದಾರೆ. ಮಳೆಗಾಲದ ಹಂತದಲ್ಲಿ ಹೇಮೆ ಹಂಚಿಕೆ ನಡೆದರೆ ಯಾರಿಗೂ ನಷ್ಟವಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಸರ್ಕಾರ ಸಿದ್ದವಿದೆ ಎಂದ ಅವರು ಕೊಬ್ಬರಿ ಬೆಲೆ ಮತ್ತಷ್ಟು ಏರಿಕೆ ಮಾಡಲು ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಪಕ್ಷಾತೀತವಾಗಿ ಆಗ್ರಹಿಸಿ ಸರ್ಕಾರದ ಗಮನ ಸೆಳೆದಿದ್ದು ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸಿ ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಲು ಕ್ರಮವಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳು ಆಡಳಿತಾವಧಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಆಡಳಿತಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಲಾಗಿದೆ. ಮೂರು ಪಂಚಾಯಿತಿಗೆ ಒರ್ವ ಆಡಳಿತಾಧಿಕಾರಿಯಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುವುದು. ಈ ಪಟ್ಟಿ ಸಿದ್ಧವಾಗಿದ್ದು ಶೀಘ್ರದಲ್ಲಿ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ ಎಂದ ಅವರು ಸಿ.ಎಸ್.ಪುರ ಹೋಬಳಿ ಸೇರಿದಂತೆ ತುರುವೇಕೆರೆ ಕ್ಷೇತ್ರ 7 ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಈ ಕಾರ್ಯಕ್ಕೆ ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಮುಂದೆ ಕೂಡಾ ಅಧಿಕಾರಿಗಳ ಸಹಕಾರದಲ್ಲಿ ಅಭಿವೃದ್ದಿ ನಡೆಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಭಾನುಪ್ರಕಾಶ್, ಗ್ರಾಪಂ ಅಧ್ಯಕ್ಷೆ ಗೀತಾಲಕ್ಷ್ಮೀ ರಾಮಕೃಷ್ಣ, ಉಪಾಧ್ಯಕ್ಷ ಪಾಂಡುರಂಗಯ್ಯ, ಪಿಡಿಓ ಶಿವಾನಂದಯ್ಯ, ಲೆಕ್ಕಾಧಿಕಾರಿ ಶೇಖರ್ ಇತರರು ಇದ್ದರು.