ರಾಜೀವ್ ಗಾಂಧಿ ಸರಕಾರಿ ಆಸ್ಪತ್ರೆ ಕರ್ಮಕಾಂಡ ಬಿಚ್ಚಿಟ್ಟ ಪೊಲೀಸ್! ವೈದ್ಯರು ಬಿಡಿ ಕನಿಷ್ಟ ಮಾಸ್ಕ್ ಕೂಡಾ ಇಲ್ಲ!!
ಬೆಂಗಳೂರು: ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಯಾವೆಲ್ಲ ಸೌಲಭ್ಯ ಸಿಗುತ್ತೆ ಅನ್ನೋದಕ್ಕೆ ಪುರಾವೆಯಾಗಿ ಕೊರೋನಾ ಸೋಂಕಿತ ಪೊಲೀಸ್ ಸಿಬ್ಬಂದಿಯೊಬ್ಬರು ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಸರಕಾರದ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.
ಪೊಲೀಸ್ ಸಿಬ್ಬಂದಿ ವಿಡಿಯೋ ಮಾಡಿದ್ದು ಅದರಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಯ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮಾಸ್ಕ್, ಸ್ಯಾನಿಟೈಸ್ ಯಾವುದೂ ಇಲ್ಲದೆ ಸರಿಯಾಗಿ ಆಹಾರವಿಲ್ಲದೆ ಕೊರೋನಾ ಸೋಂಕಿತರನ್ನು ಕೂಡಿಹಾಕಲಾಗಿದ್ದು ವೈದ್ಯರು ಕೂಡಾ ಇತ್ತ ಸುಳಿಯುವುದಿಲ್ಲ ಎಂದು ಆರೋಪಿಸಿದ್ದಾರೆ.
ಅರೋಗ್ಯ ಸಚಿವ ಶ್ರೀರಾಮುಲು, ಮುಖ್ಯಮಂತ್ರಿ ಸಮೇತ ರಾಜ್ಯ ಕೇಂದ್ರ ಸರಕಾರಗಳು ಕೊರೋನಾ ತಡೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ, ಜನರು ಭಯಪಡುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದು ಇಲ್ಲಿ ನೋಡಿದರೆ ಯಾವ ಸೌಲಭ್ಯ ಕೂಡಾ ಇಲ್ಲದೆ ಹೊಟ್ಟೆಗೆ ಆಹಾರವಿಲ್ಲದೆ ಸಾಯುವಂತಾಗಿದೆ ಪ್ಲೀಸ್ ನಮ್ಮನ್ನು ರಕ್ಷಿಸಿ ಎಂದು ಕೊರೋನಾ ಸೋಂಕಿತರು ಗೋಗರೆದಿದ್ದಾರೆ.
