ರವಿ ಪೂಜಾರಿ ಸಹಚರ ಗುಲಾಮ್ ಮುಹಮ್ಮದ್ ಅರೆಸ್ಟ್!

ಮಂಗಳೂರು: ಇತ್ತೀಚೆಗೆ ಸೆನೆಗಲ್ ನಲ್ಲಿ ಬಂಧಿತನಾಗಿ ಪೊಲೀಸ್ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯ ಬಂಟನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಪು ನಿವಾಸಿ ಗುಲಾಮ್ ಮುಹಮ್ಮದ್(56) ಎಂದು ಹೆಸರಿಸಲಾಗಿದೆ.
ಗುಲಾಮ್ ಮುಹಮ್ಮದ್ ರಾಜಕೀಯ ಪಕ್ಷಗಳಲ್ಲಿ ಸಕ್ರಿಯನಾಗಿದ್ದು ರವಿ ಪೂಜಾರಿ ಪರ ಹಫ್ತಾ ವಸೂಲಿ ನಡೆಸುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು 10 ದಿನಗಳ ಕಾಲ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ಪಡೆದಿದೆ. ಗುಲಾಮ್ ಟ್ರಾವೆಲ್ ಏಜನ್ಸಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ.