`ಯೋಧರ ಬಲಿದಾನ ವ್ಯರ್ಥವಾಗಲು ಬಿಡೆವು’ -ಚೀನಾ ವಿರುದ್ಧ ಗುಡುಗಿದ ಮೋದಿ!
ನವದೆಹಲಿ:
ಚೀನಾ ವಿರುದ್ಧ ನಡೆದ ಘರ್ಷಣೆಯಲ್ಲಿ ನಮ್ಮ 20 ಮಂದಿ ಸೈನಿಕರು ಹುತಾತ್ಮರಾಗಿದ್ದು, ಅವರ ಬಲಿದಾವನ್ನು ವ್ಯರ್ಥವಾಗಲು ಖಂಡಿತಾ ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿಯೇ ಗುಡುಗಿದ್ದಾರೆ. ಇಂದು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಮಾತಾಡಿದ ಮೋದಿ ಅವರು, ಸೈನಿಕರ ಬಲಿದಾನಕ್ಕಾಗಿ 2 ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತಾಡಿದ ಮೋದಿ ಅವರು, `ಭಾರತ ಗಡಿಭಾಗದ ರಾಷ್ಟ್ರಗಳ ಜೊತೆ ಶಾಂತಿ ಬಯಸುತ್ತಿದೆ. ಆದರೆ ಚೀನಾ ನಮ್ಮ ಸೈನಿಕರ ಮೇಲೆ ದಾಳಿ ಮಾಡಿದೆ. ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟಾದಾಗ ತಕ್ಕ ಉತ್ತರ ನೀಡುತ್ತೇವೆ’ ಎಂದು ಹೇಳಿದ್ದಾರೆ.